LIVE| ನಟ ಚಿರು ವಿಧಿವಶ- ಅಭಿಮಾನಿಗಳಿಂದ ಅಂತಿಮ ನಮನ : ಅಪರಾಹ್ನ ನಡೆಯಲಿದೆ ಅಂತ್ಯಸಂಸ್ಕಾರ

843329
Published on

ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ(39) ನಿನ್ನೆ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರ ಇಂದು ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ಫಾರ್ಮ್​ ಹೌಸ್​ನಲ್ಲಿ ನಡೆಯಲಿದೆ. ಈ ಸಂಬಂಧ ಸಿದ್ಧತೆಗಳು ನಡೆದಿದೆ.

ಚಿರಂಜೀವಿ ಸರ್ಜಾ ಅವರ ಮೃತದೇಹ ಜಯನಗರದ ಸಾಗರ್​ ಅಪೋಲೋ ಆಸ್ಪತ್ರೆಯಿಂದ ಬಸವನಗುಡಿಯಲ್ಲಿರುವ ಅವರ ಸ್ವಗೃಹಕ್ಕೆ ತಂದ ಬಳಿಕ ಬೆಳಗಿನ ಜಾವದವರೆಗೂ ಸಾವಿರಾರು ಅಭಿಮಾನಿಗಳು ಚಿರು ಅಂತಿಮ ದರ್ಶನ ಪಡೆದರು. ನಟ ಅರ್ಜುನ್ ಸರ್ಜಾ ರಾತ್ರಿ ಇಡೀ ಅಳಿಯನ ಪಾರ್ಥಿವ ಶರೀರದ ಎದುರೇ ದುಃಖಿತರಾಗಿ ಕುಳಿತಿದ್ದರು. ಸಾಧುಕೋಕಿಲ ಅವರು ಅರ್ಜುನ್​ ಅವರ ಜತೆಗಿದ್ದರು. ಇಂದು ಮಧ್ಯಾಹ್ನ 12 ಗಂಟೆ ತನಕ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕುಟುಂಬದವರು ತೀರ್ಮಾನಿಸಿದ್ದಾರೆ.

ಮಧ್ಯಾಹ್ನ 12 ಗಂಟೆ ನಂತರ ನೆಲಗುಳಿ ಗ್ರಾಮದ ಫಾರ್ಮ್​ ಹೌಸ್​ಗೆ ಅಂತಿಮ ಯಾತ್ರೆ ಮೆರವಣಿಗೆ ಮೂಲಕ ಸಾಗಲಿದೆ. ಅಲ್ಲಿ ಗೌಡ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಆಪ್ತಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net