ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ

Arjun Sarja 2
Published on

ಇಂದು ಹೃದಯಾಘಾತದಿಂದ ಮೃತಪಟ್ಟ ಸ್ಯಾಂಡಲ್​ವುಡ್ ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಅವರ ಮಾವ, ಖ್ಯಾತ ನಟ ಅರ್ಜುನ್​ ಸರ್ಜಾ ತಮ್ಮ ಫೇಸ್​ಬುಕ್​​ನಲ್ಲಿ ಕಪ್ಪುಬಣ್ಣದ ಫೋಟೋಗಳನ್ನು ಅಪ್ಲೋಡ್​ ಮಾಡುವ ಮೂಲಕ ಕಂಬನಿ ಮಿಡಿದಿದ್ದಾರೆ.

ತಂಗಿಯ ಮಕ್ಕಳಾದ ಚಿರಂಜೀವಿ ಮತ್ತು ಧ್ರುವ ಇಬ್ಬರೂ ನನ್ನ ನೆಚ್ಚಿನ ಹುಡುಗರು ಎಂದು ಅರ್ಜುನ್ ಸರ್ಜಾ ಯಾವಾಗಲೂ ಹೇಳುತ್ತಿದ್ದರು. ಇವರಿಬ್ಬರಿಗೂ ಅಷ್ಟೇ ಮಾವ ಅರ್ಜುನ್​ ಸರ್ಜಾ ಒಂಥರಾ ಗಾಡ್​ಫಾದರ್​ ಇದ್ದಂತೆ. ಅರ್ಜುನ್​ ಸರ್ಜಾ ಅವರು ಮೇ 29ರಂದು ಹಳೇ ಫೋಟೋವೊಂದನ್ನು ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ತಾವು, ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರೊಂದಿಗೆ ಇರುವ ಸೆಲ್ಫಿ ಫೋಟೋವನ್ನು ಅಪ್ಲೋಡ್​ ಮಾಡಿ, ಸರ್ಜಾ ಫ್ಯಾಮಿಲಿ ಎಂದು ಕ್ಯಾಪ್ಷನ್​ ಬರೆದಿದ್ದರು. ಇದನ್ನೂ ಓದಿ: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವು

ಆದರೆ ಇಂದು ಏಕಾಏಕಿ ಆ ಕುಟುಂಬದ ಒಂದು ಕುಡಿ ಇನ್ನಿಲ್ಲದಂತಾಗಿದೆ. ಅರ್ಜುನ್​ ಸರ್ಜಾ ಚೆನ್ನೈನಿಂದ ಈಗಾಗಲೇ ಹೊರಟಿದ್ದಾರೆ. ಚಿರಂಜೀವಿ ಮೃತಪಟ್ಟ ಬಳಿಕ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಫೇಸ್​ಬುಕ್​ನ ಪ್ರೊಫೈಲ್​ ಹಾಗೂ ಕವರ್ ಫೋಟೋಗಳಿಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ್ದಾರೆ. ಈ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net