ಮದ್ಯದಂಗಡಿ ತೆರೆಯದಂತೆ ಒತ್ತಾಯ

pro
ಸಾಗರದ ವಿಜಯನಗರ ಬಡಾವಣೆ ಸಮೀಪದ ಭೀಮನಕೋಣೆ ರಸ್ತೆಯಲ್ಲಿ ಮದ್ಯದಂಗಡಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ನಾಗರಿಕ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಗಣೇಶಪ್ರಸಾದ್, ರವಿ, ಆರ್.ಶ್ರೀನಿವಾಸ್, ಶಶಿಕಾಂತ್, ಸತೀಶ್ ಇತರರಿದ್ದರು.
Published on

ಸಾಗರ: ವಿಜಯನಗರ ಬಡಾವಣೆ ಸಮೀಪದ ಭೀಮನಕೋಣೆ ರಸ್ತೆಯಲ್ಲಿ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಶುಕ್ರವಾರ ವಿಜಯನಗರ ನಾಗರಿಕ ವೇದಿಕೆ ಪದಾಧಿಕಾರಿಗಳು ಮದ್ಯದಂಗಡಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಹೊಸ ಮದ್ಯದಂಗಡಿ ಆರಂಭಿಸುವಾಗ ನಗರಸಭೆ ಪರವಾನಗಿ ಸೇರಿ ಯಾವುದೇ ಕಾನೂನು ಪಾಲನೆ ಮಾಡಿಲ್ಲ. ಶಾಸಕರಿಗೆ ಈ ಬಗ್ಗೆ ಮಾಹಿತಿ ಇದೆಯೋ, ಇಲ್ಲವೋ ಗೊತ್ತಿಲ್ಲ. ರಾತ್ರೋರಾತ್ರಿ ಮದ್ಯದಂಗಡಿ ತೆರೆಯಲಾಗಿದೆ. ಈ ಭಾಗದಲ್ಲಿ ರಾಮನಗರ, ವಿಜಯನಗರ ಮತ್ತಿತರ ಬಡಾವಣೆಗಳಿವೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ನಗರಸಭೆ ಸದಸ್ಯ ಕೆ.ಆರ್.ಗಣೇಶಪ್ರಸಾದ್ ಒತ್ತಾಯಿಸಿದರು.

ನಗರಸಭೆ ಸದಸ್ಯ ರವಿ ಲಿಂಗನಮಕ್ಕಿ ಮಾತನಾಡಿ, ಮದ್ಯದಂಗಡಿ ತೆರೆಯುವವರು ಕಾನೂನು ಪಾಲನೆ ಮಾಡಿಲ್ಲ. ಸರ್ಕಾರ ತೆರಿಗೆ ಸಂಗ್ರಹಿಸುವ ಉದ್ದೇಶದಿಂದ ಎಲ್ಲೆಂದರಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು. ಇದರಿಂದ ನೆಮ್ಮದಿಯ ವಾತಾವರಣ ಹದಗೆಡುತ್ತದೆ. ಜನರ ನೆಮ್ಮದಿ ಕಿತ್ತುಕೊಂಡು ಹಣ ಸಂಗ್ರಹ ಮಾಡುವ ಸರ್ಕಾರದ ನೀತಿ ಖಂಡನೀಯ. ಶಾಸಕರು ಸಹ ಇದೇ ಬಡಾವಣೆ ನಿವಾಸಿಯಾಗಿದ್ದು ಅವರ ಗಮನಕ್ಕೆ ತಂದಿದ್ದು, ಅದನ್ನು ಮುಚ್ಚಿಸುವ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಗರಸಭೆ ಸದಸ್ಯರಾದ ಆರ್.ಶ್ರೀನಿವಾಸ್, ಅರವಿಂದ ರಾಯ್ಕರ್, ಪ್ರಮುಖರಾದ ನಾರಾಯಣಮೂರ್ತಿ, ಶಶಿಕಾಂತ್, ಸತೀಶ್, ಪರಶುರಾಮ್, ವೈ.ಮೋಹನ್, ಸತ್ಯನಾರಾಯಣ, ಶ್ರೀನಾಥ್, ಶ್ರೀಧರಮೂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net