ತಳ್ಳುವ ಗಾಡಿಯಲ್ಲಿ ತರಕಾರಿ ಜತೆ ಮದ್ಯ ಮಾರಾಟ ಮಾಡಿದ ವ್ಯಾಪಾರಿ!

selling liquor trolly (1)
Published on

ತೆಲಂಗಾಣ: ಬೆಂಡೆಕಾಯಿ, ಬದನೆ, ಮೆಣಸಿನಕಾಯಿಯನ್ನು ಬೀದಿ ಬಂಡಿಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡುವುದನ್ನು ನಾವು ನೋಡಿದ್ದೇವೆಆದರೆ ತೆಲಂಗಾಣದ ಸಿರಿಸಿಲ್ಲಾದಲ್ಲಿ ವ್ಯಕ್ತಿಯೊಬ್ಬ ತಳ್ಳುವ ಗಾಡಿಯಲ್ಲಿ ಮದ್ಯದ ಬಾಟಲಿಗಳನ್ನು ತರಕಾರಿ ಎಂದು ಮಾರಾಟ ಮಾಡುತ್ತಿದ್ದಾನೆ.

ಈ ವ್ಯಾಪಾರಿಯ ಹೆಸರು ಸೋಮಿಶೆಟ್ಟಿ ದಶರಧಂ. ತಳ್ಳುವ ಗಾಡಿಯ ಒಂದು ಬದಿಯಲ್ಲಿ ತರಕಾರಿ, ಇನ್ನೊಂದು ಬದಿಯಲ್ಲಿ ಬಿಯರ್ ಮತ್ತು ವಿಸ್ಕಿ ಬಾಟಲಿ ಮಾರುತ್ತಿದ್ದಾರೆ. ತರಕಾರಿ, ಬಿಯರ್, ವಿಸ್ಕಿ ಬಾಟಲ್ ಗಳನ್ನು ಜೋರಾಗಿ ಮಾರುತ್ತಿದ್ದ ಅವರನ್ನು ಕಂಡವರೆಲ್ಲ ಮೂಕವಿಸ್ಮಿತರಾದರು. ಈ ವೀಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಇದೇನು ಡೋರ್ ಡೆಲಿವರಿ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಬೀದಿಯಲ್ಲಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರುವಾಗ ಸುತ್ತಲಿನ ಹೆಂಗಸರು ಗಾಡಿಯ ಸುತ್ತ ಜಮಾಯಿಸಿ ‘‘ಬೀಟ್ರೂಟ್ ಎಷ್ಟು..ಹಸಿಮೆಣಸಿನಕಾಯಿ ದರ ಇಷ್ಟು ಹೆಚ್ಚಿದೆ...?ಇನ್ನೂ ಕಡಿಮೆ ಮಾಡಬೇಕಲ್ಲವೇ?’’ ಎಂದು ಚೌಕಾಸಿ ಮಾಡುವುದನ್ನು ನೋಡುತ್ತೇವೆ. ಆದರೆ ಸಚಿವ ಕೆಟಿಆರ್ ಅವರ ಕ್ಷೇತ್ರವಾಗಿರುವ ರಾಜಣ್ಣ ಸಿರ್ಸಿಲ್ಲ ಕ್ಷೇತ್ರದಲ್ಲಿ ಮಾತ್ರ ವ್ಯಕ್ತಿಯೊಬ್ಬ ರಾಜ್ಯ ಸರ್ಕಾರದ ಮದ್ಯ ನೀತಿಯನ್ನು ವಿರೋಧಿಸಿ ತಳ್ಳುಗಾಡಿ ಮೇಲೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿರಿಸಿಲ್ಲದ ಶಾಂತಿನಗರ ಬಜಾರ್‌ನಲ್ಲಿರುವ ಸಣ್ಣ ವ್ಯಾಪಾರಸ್ಥರು ಮದ್ಯದ ಬಾಟಲಿಗಳನ್ನು ತರಕಾರಿಗಳಂತೆ ಮಾರಾಟ ಮಾಡುತ್ತಾರೆ.

ಗಾಡಿಯಲ್ಲಿ ತರಕಾರಿ ಜತೆಗೆ ಮದ್ಯ ಮಾರಾಟ ಮಾಡುವುದು ಏಕೆ ಎಂದು ಕೆಲವರು ಕುತೂಹಲದಿಂದ ಅವರನ್ನು ಪ್ರಶ್ನಿಸಿದಾಗ, ಬಿಆರ್‌ಎಸ್ ಸರ್ಕಾರ ಜಾರಿಗೆ ತಂದಿರುವ ಮದ್ಯ ನೀತಿಯನ್ನು ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿ ಜನರ ಗಮನ ಸೆಳೆಯುವುದರ ಜತೆಗೆ ಅವರಿಗೆ ಶಿಕ್ಷಣ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net