

ಬೆಂಗಳೂರು: ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನ 21ರ ಬದಲಾಗಿ 18ಕ್ಕೆ ಇಳಿಸಲು ಮುಂದಾಗಿದ್ದ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿದೆ.
ಮದ್ಯ ಖರೀದಿ ಮತ್ತು ಕನಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 18 ಕ್ಕೆ ಇಳಿಸಲು ಮುಂದಾಗಿದ್ದು, 'ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತು) ನಿಯಮಗಳು-1967'ಕ್ಕೆ ತಿದ್ದುಪಡಿ ತರಲು ಅಬಕಾರಿ ಇಲಾಖೆಯು ಕರಡು ಪ್ರಸ್ತಾವನೆಯನ್ನು ಪ್ರಕಟಿಸಿತ್ತು. ಮದ್ಯ ಖರೀದಿ ವಯಸ್ಸಿನ ಮಿತಿ ಕಡಿತ ಮಾಡಿ ಕರಡು ಅಧಿಸೂಚನೆಯನ್ನು ಸೋಮವಾರ ಪ್ರಕಟಿಸಿತ್ತು. ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಖಂಡನೆ ವ್ಯಕ್ತವಾಗುತ್ತಿದ್ದಂತೆ, ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.