ಯೂಕ್ರೇನ್‌ ರಾಜಧಾನಿಯಲ್ಲಿ ಹೆಲಿಕಾಪ್ಟರ್​ ದುರಂತ: ಗೃಹ ಸಚಿವ ಸೇರಿ 15 ಮಂದಿ ದುರ್ಮರಣ

Ukraine helicopter crash kills 18, including minister
Published on

ಕೀವ್​: ರಷ್ಯಾ ದಾಳಿಗೆ ಅಕ್ಷರಶಃ ತತ್ತರಿಸಿರುವ ಯೂಕ್ರೇನ್​ನಲ್ಲಿ ಇಂದು(ಬುಧವಾರ) ಮತ್ತೊಂದು ದುರಂತ ಸಂಭವಿಸಿದೆ. ಕಟ್ಟಟವೊಂದಕ್ಕೆ ಹೆಲಿಕಾಪ್ಟರ್ ಡಿಕ್ಕಿಯಾಗಿದ್ದು, ಈ ದುರಂತದಲ್ಲಿ ಗೃಹ ಸಚಿವ ಸೇರಿ 18 ಮಂದಿ ಮೃತಪಟ್ಟಿದ್ದಾರೆ.

ಯೂಕ್ರೇನ್​ ಒಂದು ವರ್ಷದಿಂದ ಭಾರಿ ಸುದ್ದಿಯಲ್ಲಿ ಇರುವ ದೇಶ. ಯೂಕ್ರೇನ್​ ಮೇಲೆ ರಷ್ಯಾ ದಾಳಿ ನಿರಂತರ ದಾಳಿ ನಡೆಸಿದ್ದು, ಬಹುತೇಕ ಇಡೀ ದೇಶ ಸ್ಮಶಾನವಾಗಿ ಪರಿಣಮಿಸಿದೆ. ಸೇನಾಪಡೆ, ಅಮಾಯಕರು, ವೃದ್ಧರು, ಮಕ್ಕಳು ಎನ್ನದೇ ಲೆಕ್ಕವಿಲ್ಲದಷ್ಟು ಮಂದಿಯ ಜೀವ ಹೋಗಿದೆ. ಅಂದಾಜಿಗೂ ಸಿಗಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಎಲ್ಲಿ ನೋಡಿದರೂ ಸಾವು-ನೋವು.

ಇಂತಹ ಸಂಕಷ್ಟದ ಸ್ಥಿತಿಯಲ್ಲೂ ಬುಧವಾರ ಉಕ್ರೇನ್‌ನ ರಾಜಧಾನಿ ಕೈವ್ ಬಳಿಯ ಬ್ರೋವರಿ ಪಟ್ಟಣದ ನರ್ಸರಿಗೆ ಹೆಲಿಕಾಪ್ಟರ್​ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ಅಪ್ಪಳಿಸಿದ ಪರಿಣಾಮ ಉಕ್ರೇನ್‌ನ ಗೃಹ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ(42) ಸೇರಿ 18 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಪೈಕಿ ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದು ರಷ್ಯಾ ಕೃತ್ಯವೋ ಅಲ್ಲವೋ ಎಂಬುದು ಇನ್ನೂ ಗೊತ್ತಾಗಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net