

ಧಾರವಾಡ: ನಿಗದಿತ ಭಾರಕ್ಕಿಂತ ಜಾಸ್ತಿಯಾದ ಕಾರಣ ಲಿಫ್ಟ್ ಕುಸಿದು ಬಿದ್ದು ಒಂಭತ್ತು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಕೃಷಿ ವಿಶ್ವವಿದ್ಯಾಲಯದ ಎದುರಿನ ಹೋಟೆಲ್ವೊಂದರಲ್ಲಿ ನಡೆದಿದೆ.
ಗಾಯಾಳುಗಳೆಲ್ಲ ಧಾರವಾಡ ಹೊರವಲಯದ ಬೇಲೂರಿನ ಕಂಪನಿಯೊಂದರ ಉದ್ಯೋಗಿಗಳಾಗಿದ್ದು ನಿನ್ನೆ ರಾತ್ರಿ ಈ ಹೋಟೆಲ್ಗೆ ಆಗಮಿಸಿದ್ದರು. ಹೆಚ್ಚಿಗೆ ಜನ ತುಂಬಿದ್ದರಿಂದ ಲಿಫ್ಟ್ ಕುಸಿದಿದೆ.
ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನುಳಿದ ನಾಲ್ವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.