ಜೀವನವು ಪಂಚಾಗ್ನಿ ದಾಟಿ ಹೊರಬಂದಾಗ ಸುವರ್ಣಮಯ

Enlightenment
Published on

ನಿಂದನೆಯ ಬೆಂಕಿಯು ನಿಮ್ಮಲ್ಲಿ ನೀತಿಯನ್ನು ಎತ್ತಿ ಹಿಡಿಯುತ್ತದೆ. ಆದರೆ ಅದು ಹತೋಟಿ ಯನ್ನು ಮೀರಿದರೆ, ಅದೇ ಬೆಂಕಿಯು ನಿಮ್ಮ ಸ್ವಾತಂತ್ರ್ಯನ್ನು ನುಂಗಿಹಾಕಿ ಬಿಡುತ್ತದೆ. ನಿಮ್ಮ ಸ್ವಚ್ಛಂದತೆಯ ಭಾವ, ನಿಮ್ಮ ಕೇಂದ್ರೀಕರಣದ ಭಾವ ನಾಶವಾಗಿ ಹೋಗುತ್ತದೆ.

ಶ್ರೀ ಸ್ಫೂರ್ತಿ
ಬಡಬಾಗ್ನಿ, ನಿಂದನೆಯ ಬೆಂಕಿ. ಜನರು ನಿಮ್ಮನ್ನು ನಿಂದಿಸಿದಾಗ ಏನಾಗುತ್ತದೆ? ಬೆಂಕಿ ಏಳುತ್ತದೆ. ನಿಮ್ಮ ವ್ಯವಸ್ಥೆಯಲ್ಲಿನ ಬೆಂಕಿಯು ಉರಿದೇಳುತ್ತದೆ. ದೊಡ್ಡ ಗುಂಪಿನ ಎದುರು ನೀವು ನಿಂತುಕೊಂಡಾಗ ಏನಾಗುತ್ತದೆ? ನಿಮ್ಮ ಎದೆಯ ಬಡಿತ ನಿಮಗೆ ಕೇಳಿಸುತ್ತದೆ. ನೀವು ನಡುಗುತ್ತಿರುತ್ತೀರಿ. ಜನರ ನಿಂದನೆಯ, ಜನರ ಅಭಿಪ್ರಾಯಗಳ ಭೀತಿ. ಇದು ಒಂದು ಸತ್ಯ.

ಮಾನವನು ಸಾಮಾಜಿಕ ಪ್ರಾಣಿ. ಮಾನವನು ಸಮಾಜದಲ್ಲಿ ಜೀವಿಸುತ್ತಾನೆ ಮತ್ತು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ತಮ್ಮ ಇಚ್ಛೆ ಬಂದಂತೆಯೆ ಒಬ್ಬರು ಜೀವಿಸಲು ಸಾಧ್ಯವಿಲ್ಲ. ಮಾನವನು, ನಾನು ಸ್ವತಂತ್ರ ಜೀವಿ. ನನಗೆ ಏನು ಬೇಕೋ ಅದನ್ನೇ ಮಾಡುತ್ತೇನೆ ಎನ್ನಲು ಸಾಧ್ಯವಿಲ್ಲ. ನೀವು ರಸ್ತೆಯಲ್ಲಿ ಗಾಡಿಯನ್ನು ಓಡಿಸಬೇಕಾದರೆ, ರಸ್ತೆಯ ಒಂದು ಭಾಗದಲ್ಲೇ ಚಲಿಸಬೇಕು. ನೀವು ಎಲ್ಲಿ ನಡೆಯಬೇಕೊ ಅಲ್ಲಿಯೇ ನಡೆಯಬೇಕು. ಎಲ್ಲಿ ನಿಲ್ಲಬೇಕೊ ಅಲ್ಲಿಯೆ ನಿಲ್ಲಬೇಕು.

ಕೆಲವು ನಿಯಮಗಳನ್ನು ಮತ್ತು ಕೆಲವು ನೀತಿಗಳನ್ನು ಪಾಲಿಸಬೇಕು. ನೀವು ಜಗತ್ತಿನಲ್ಲಿ ನಿಯಮಗಳನ್ನು ಪಾಲಿಸಬೇಕಾದಾಗ, ಸಹಜವಾಗಿಯೆ ನಿಂದನೆಯ ಭಯ ಇರುತ್ತದೆ. ಹೊಡೆಸಿಕೊಳ್ಳುವ ಭೀತಿ, ಶಿಕ್ಷೆಗೆ ಒಳಗಾಗುವ ಭೀತಿ ಸಹ ಇರುತ್ತದೆ. ಇವೆಲ್ಲಾ ಹೊರಗೆ ಪ್ರಕಟವಾಗುತ್ತದೆ.

ಕೆಲವು ನಿಯಮಗಳನ್ನು ಪಾಲಿಸಬೇಕಾಗಿ ಬಂದಾಗ, ಆ ನಿಯಮಗಳನ್ನು ಎತ್ತಿ ಹಿಡಿಯಬೇಕಾದ ಕಾಳಜಿಯು ಉಂಟಾಗುತ್ತದೆ. ಈಗ ನೀವು, ಜನರು ನಿಮ್ಮ ಬಗ್ಗೆ ಏನು ಮಾತನಾಡುತ್ತಾರೊ ಎಂದು ಬಹಳವಾಗಿ ಚಿಂತಿಸತೊಡಗಿದರೆ ನೀವು ವಿಷಯವನ್ನು ಅರ್ಥ ಮಾಡಿಕೊಂಡಿಲ್ಲ. ನಿಂದನೆಯ ಬೆಂಕಿಯು ನಿಮ್ಮಲ್ಲಿ ನೀತಿಯನ್ನು ಎತ್ತಿ ಹಿಡಿಯುತ್ತದೆ. ಆದರೆ ಅದು ಹತೋಟಿಯನ್ನು ಮೀರಿದರೆ, ಅದೇ ಬೆಂಕಿಯು ನಿಮ್ಮ ಸ್ವಾತಂತ್ರ್ಯನ್ನು ನುಂಗಿಹಾಕಿ ಬಿಡುತ್ತದೆ. ನಿಮ್ಮ ಸ್ವಚ್ಛಂದತೆಯ ಭಾವ, ನಿಮ್ಮ ಕೇಂದ್ರೀಕರಣದ ಭಾವ ನಾಶವಾಗಿ ಹೋಗುತ್ತದೆ. ನಿಂದನೆಯ ಬೆಂಕಿಯು ನಿಮ್ಮಲ್ಲಿ ತೀವ್ರವಾಗಿಬಿಟ್ಟಾಗ, ಆಗ ನೀವು ವ್ಯರ್ಥ ವಿಷಯಗಳ ಬಗ್ಗೆ ಆತಂಕಗೊಂಡು ಚಿಂತಿತರಾಗಿ ಬಿಡುತ್ತೀರಿ. ಅಲ್ಲವೆ? ನಿಂದನೆ ಬೆಂಕಿಯಲ್ಲಿ ಪಯಣಸಿ, ಜನರು ಏನು ಹೇಳಿದರೂ ಪರವಾಗಿಲ್ಲ. ಈ ಅಭಿಪ್ರಾಯಗಳೆಲ್ಲಾ ಬದಲಿಸುತ್ತವೆ.

ನಿಮ್ಮಚೈತನ್ಯವನ್ನು ಗಮನಿಸಿ. ನೀವು ಯಾರಿಗೂ ಯಾವ ತೊಂದರೆಯನ್ನೂ ಮಾಡದೆ ಇದ್ದರೆ, ನೀವು ಮುಂದೆ ನಡೆಯುತ್ತೀರಿ. ನಿಂದನೆಯ ಭೀತಿಯಿಂದ ಜನರು ನೈತಿಕತೆಯ ಸೀಮಿತತೆಯಲ್ಲಿ ಇರುತ್ತಾರೆ. ಆದರೆ ಈ ಭೀತಿ ನಿಯಂತ್ರಣವನ್ನು ದಾಟಿ ಹೋದಾಗ, ಸೀಮಿತತೆಯನ್ನು ದಾಟಿ ಹೋದಾಗ, ನಿಂದನೆಯ ಭೀತಿಯಿಂದ ನಿಮ್ಮ ಸ್ವಾತಂತ್ರ್ಯ ತೆರೆದ ಮನಸ್ಸು, ಕೇಂದ್ರೀಕೃತತೆಯು ಮುಚ್ಚಿ ಹೋಗುತ್ತದೆ. ನಿಂದನೆಯ ಬೆಂಕಿ ವಿಪರೀತವಾದರೆ ನೀವು ಬಹಳ ಒತ್ತಡಕ್ಕೆ ಒಳಗಾಗಿ, ಏನೂ ಇಲ್ಲದ ವಿಷಯದ ಬಗ್ಗೆ ಚಿಂತಿಸತೊಡಗುತ್ತೀರಿ. ನಿಂದನೆಯ ಭೀತಿಯನ್ನು ಎದುರಿಸಬೇಕು. ಜನರು ಏನಾದರೂ ಹೇಳಲಿ, ಅದರಿಂದೇನೂ ಆಗುವುದಿಲ್ಲ. ಅವರ ಅಭಿಪ್ರಾಯಗಳು ಬದಲಿಸುತ್ತವೆ. ನಿಮ್ಮ ಚೈತನ್ಯದಲ್ಲಿ ನೀವು ಯಾರಿಗೂ ಹಾನಿ ಮಾಡುತ್ತಿಲ್ಲವೆಂದು ತಿಳಿದಿದೆ. ಜೀವನದ ಐದು ಬೆಂಕಿಗಳು - ಪಂಚಾಗ್ನಿಗಳು

1. ಭೂತಾಗ್ನಿ 2. ಕಾಮಾಗ್ನಿ 3. ಜಠರಾಗ್ನಿ 4. ಜ್ಞಾನಾಗ್ನಿ 5. ಬಡಬಾಗ್ನಿ.ಜೀವನವು ಈ ಎಲ್ಲಾ ಐದು ಬೆಂಕಿಗಳಿಂದ ದಾಟಿ ಹೊರಬಂದಾಗ ಸುವರ್ಣಮಯವಾಗುತ್ತದೆ. ತಪಸ್ಸು ಎಂದರೆ ಸುಡುವುದು, ಬೆಂಕಿಯಲ್ಲಿ ಬೇಯುವುದು. ಕೆಲವು ಮಾಸ ಪ್ರತಿಕೆಗಳಲ್ಲಿ, ಕುಂಭಮೇಳದಲ್ಲಿ ಕೆಲವು ಜನರು ಒಂದು ಕಾಲಲ್ಲಿ ನಿಂತು ಮೈಯಲ್ಲೆಲ್ಲಾ ಬೂದಿಯನ್ನು ಬಳೆದುಕೊಂಡು ತಮ್ಮ ಸುತ್ತಲೂ ಬೆಂಕಿ ಹಾಕಿಕೊಂಡಿರುವ ಚಿತ್ರ ಇರುತ್ತದೆ. ಇದು ಪಂಚಾಗ್ನಿಯ ಅತೀ ತಪ್ಪಾದ ತರ್ಕ, ಅತರ್ಕ. ಈ ಐದು ಬೆಂಕಿಗಳನ್ನೂ ದಾಟಿ ಹೋದವರು ಶುದ್ಧವಾಗುತ್ತಾರೆ. ಅವರು ದಡದ ಆ ಕಡೆಯನ್ನು ಸೇರುತ್ತಾರೆ. ಇದೇ ಅದರ ಅರ್ಥ. ಆದರೆ ಕೆಲವರು ಇದನ್ನು ಬಹಳ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಕೆಲವರು, ಸರಿ ನಿಮ್ಮ ಸುತ್ತಲೂ ಮತ್ತು ನಿಮ್ಮ ತಲೆಯ ಮೇಲೆ ಬೆಂಕಿಯನ್ನು ಇಟ್ಟುಕೊಂಡು ನಡೆಯುವುದು ಎನ್ನುತ್ತಾರೆ.

ಹೀಗೆಲ್ಲಾ ಮಾಡಿ ಜನರು ತಮ್ಮ ದೇಹಗಳನ್ನು ಹಿಂಸಿಸಿಕೊಳ್ಳುತ್ತಾ ಇರುತ್ತಾರೆ ಅಷ್ಟೆ. ಅವರು ಅಜ್ಞಾನದಿಂದ ತುಂಬಿರುತ್ತಾರೆ. ಇದನ್ನು ರಾಕ್ಷಸಿ ತಪಸ್ಸು ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net