

ಮಾದರಿಯಾದ ಹುಚ್ಚಹನುಮೇಗೌಡನ ಪಾಳ್ಯದ ರೈತ ಜೆ.ಪ್ರಸನ್ನ
ಸಾವಯವ ಗೊಬ್ಬರಕ್ಕೆ ಒತ್ತು
ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ
ವ್ಯವಸಾಯ ಎಂದರೆ ಮುಗು ಮುರಿಯುವ ಕಾಲಟ್ಟದಲ್ಲಿ ಪದವಿಗಳಿಸಿ ದೇಶ-ವಿದೇಶದಲ್ಲಿ ಕೆಲಸ ಮಾಡಿ ಕೈತುಂಬ ಸಂಬಳ ಪಡೆಯುತ್ತಿದ್ದ ಯುವಕನೊಬ್ಬ ಕೃಷಿಯತ್ತ ಮುಖಮಾಡಿ ಸಮಗ್ರ ಕೃಷಿಯಿಂದ ಬದುಕನ್ನು ಸುಂದರವಾಗಿಸಿಕೊಂಡಿದ್ದಾರೆ.
ಮಾಗಡಿ ಪಟ್ಟಣದಿಂದ ಸುಮಾರು 8 ಕಿಮೀ ದೂರದ ಕಸಬಾ ಹೋಬಳಿಯ ಹುಚ್ಚಹನುಮೇಗೌಡನ ಪಾಳ್ಯದ ಜೆ.ಪ್ರಸನ್ನ ಅವರೇ ಎಲ್ಲರಿಗೂ ಮಾದರಿಯಾದ ರೈತ.
ಐಟಿಐ, ಡಿಪ್ಲೊಮೊ ಪೂರೈಸಿ ಬೆಂಗಳೂರು, ಕಕರ್ ದೇಶದಲ್ಲಿ ಆಟೋ ಮೊಬೈಲ್ ಇಂಡಸ್ಟ್ರೀಯಲ್ನಲ್ಲಿ ಸರ್ವೀಸ್ ಅಡ್ವೇಜರ್ ಆಗಿ 8 ವರ್ಷ ಕೆಲಸ ಮಾಡಿದ ನಂತರ ವ್ಯವಸಾಯದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿ ಗ್ರಾಮಕ್ಕೆ ಮರಳಿ ಎರಡೂವರೆ ಎಕರೆಯಲ್ಲಿ ಆಧುನಿಕ ಮಾದರಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಮಾದರಿಯಾಗಿದ್ದಾರೆ.
ವಿದ್ಯಾಭ್ಯಾಸದ ವೇಳೆಯೇ ಕೃಷಿ ಬಗ್ಗೆ ಹೆಚ್ಚು ಆಸಕ್ತಿಹೊಂದಿದ್ದ ಪ್ರಸನ್ನ ಕೃಷಿಯಲ್ಲಿ ಸಾಧಿಸಬೇಕೆಂಬ ಹಂಬಲದಿಂದ ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದಾರೆ. ಅವರ ತೋಟಕ್ಕೆ ಭೇಟಿ ನೀಡಿದರೆ ಮಲೆನಾಡಿನ ಪರಿಸರದಂತೆ ಕಂಗೊಳಿಸುತ್ತದೆ.
ಮಂಗರ ಬಳ್ಳಿ, ಬಸಳೆ, ಅಲವೆರ, ಬಜ್ಜೆ, ದೊಡ್ಡಪತ್ರೆ ಸೇರಿ ಹತ್ತಾರು ಬಗೆಯ ಆಯುರ್ವೇಕ್ಕೆ ಸಂಬಂಧಿಸಿದಂತೆ ಬೆಳೆದಿದ್ದಾರೆ. ಜೇನುತುಪ್ಪವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರೆ, ಅರಿಶಿನ, ಏಲಕ್ಕಿ, ಸುವರ್ಣ ಗೆಡ್ಡೆ, ಅಡಕೆ, ತೆಂಗು ಸೇರಿ ಇನ್ನಿತರ ಬೆಳೆಗಳನ್ನು ಸ್ಥಳಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಾಭದತ್ತ ಮುಖಮಾಡಿದ್ದಾರೆ. ವಿಶೇಷವಾಗಿದ ಕೊಕೊ ಹಣ್ಣು ಪ್ರತಿ ಕೆಜಿಗೆ 900 ರೂ. ಮಾರಾಟವಾಗುತ್ತಿದೆ.
ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಸದೆ ಸಮಗ್ರ ಕೃಷಿ ಪದ್ಧತಿಯಲ್ಲಿ ಕಾಂಪೋಸ್ಟ್ ಗೊಬ್ಬರ, ಮೇಕೆ, ಕುರಿ, ಹಸು ಗೊಬ್ಬರ, ಹಸಿರೆಲೆ ಗೊಬ್ಬರದಿಂದ ಸಂಮೃದ್ಧಿಯಾಗಿ ಬೆಳೆ ಬೆಳೆದಿದ್ದು, ಎಲ್ಲ ಬೆಳೆಗಳಿಗೆ ಸಾವಯವ ಪದ್ಧತಿಯಾಗಿ ಗೊಬ್ಬರ, ಕೀಟ ನಿರ್ವಹಣೆಗೆ ಮಾಡಿದ್ದಾರೆ.
ಪಪ್ಪಾಯ, ಸೀಬೆ, ನಾಟಿ ಶುಂಠಿ, ನೆಲ್ಲಿ ಕಾಯಿ, ಸಪೋಟ, ಬ್ಯಾಲದ ಹಣ್ಣುಗಳು ಸೇರಿ ಹಲವು ಹಣ್ಣುಗಳನ್ನು ಕೀಳದೆ ತೋಟಕ್ಕೆ ಬಂದವರಿಗೆ ಮತ್ತು ಪ್ರಾಣಿ, ಪಗಳಿಗೆ ಮೀಸಲಿಡುವುದು ವಿಶೇಷವಾಗಿದೆ.
ಜಮೀನಿಗೆ ಎರಡು ಕೊಳವೆ ಬಾವಿ ಹಾಗೂ ಒಂದು ತೆರದ ಬಾವಿಯ ನೀರನ್ನು ಹವಾಮಾನ ಅನುಗುಣವಾಗಿ ಹನಿ ನೀರಾವರಿ ಮೂಲಕ ಹಾಯಿಸುತ್ತಿದ್ದಾರೆ. ಜಮೀನಿನಲ್ಲಿ ಕೆಲಸಮಾಡಲು ಯಾರನ್ನು ಆಶ್ರಯಿಸಿಕೊಳ್ಳದೆ ತಂದೆ ಜಯರಾಮಯ್ಯ ಹಾಗೂ ತಾಯಿ, ಪತ್ನಿಯೊಂದಿಗೆ ಕೃಷಿಯಲ್ಲಿ ತೊಡಗಿಕೊಳ್ಳುವುದು ಮತ್ತೊಂದು ವಿಶೇಷ.
ಜಿಕೆವಿಕೆ, ಕೆವಿಕೆ ಹಾಗೂ ತೋಟಗಾರಿಕೆ, ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದು ಅದರಂತೆ ಹಣ್ಣು ಹಾಗೂ ಇತರ ಬೆಳೆ ಬೆಳೆದು ಕೃಷಿಯಲ್ಲೇ ಖುಷಿಪಡುತ್ತಿದ್ದು, ವಾರ್ಷಿಕವಾಗಿ 5 ಲಕ್ಷ ರೂ. ಆದಾಯಗಳಿಸುತ್ತಿದ್ದಾರೆ.
ತಾಲೂಕು ಯುವ ರೈತ ಪ್ರಶಸ್ತಿಯನ್ನು ಕೆವಿಕೆಯಿಂದ ನೀಡಲಾಗಿದೆ. ಎಲ್ಲ ರೀತಿಯ ಬೆಳೆಗಳನ್ನು ಹಲವು ರೈತರು ವೀಸಿ ಮಾಹಿತಿ ಪಡೆಯುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 9 ಗಂಟೆವರೆಗೆ ಸಂಜೆ 5 ಗಂಟೆಯವರೆಗೆ ದೂರವಾಣಿ ಮೂಲಕ ಸಂಪರ್ಕಿಸ ಬಹುದಾಗಿದೆ ಜೆ.ಪ್ರಸನ್ನ 8105338549.