LIC ನೇಮಕಾತಿ 2025: 841 ಹುದ್ದೆಗಳಿಗೆ ಅಧಿಸೂಚನೆ! ಇಂದಿನಿಂದಲೇ ನೋಂದಣಿ ಪ್ರಕ್ರಿಯೆ ಆರಂಭ..

untitled-design-2025-08-16t175509283-68a078b91d3c8
Published on

LIC: ಭಾರತೀಯ ಜೀವ ವಿಮಾ ನಿಗಮವು LIC ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗ ಶುಭ ಸುದ್ದಿ ನೀಡಿದ್ದು, AAO ಮತ್ತು AE ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಸಹಾಯಕ ಆಡಳಿತಾಧಿಕಾರಿಗಳು ಮತ್ತು ಸಹಾಯಕ ಎಂಜಿನಿಯರಿಂಗ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳು LIC ಇಂಡಿಯಾದ ಅಧಿಕೃತ ವೆಬ್​ಸೈಟ್​ licindia.in ಮೂಲಕ ನೇರ ಲಿಂಕ್​ ಅನ್ನು ಕಾಣಬಹುದು. ಹುದ್ದೆಗಳು 841 ಇದ್ದು, ನೋಂದಣಿ ಪ್ರಕ್ರಿಯೆಯು ಆಗಸ್ಟ್​ 16 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್​ 8, 2025 ರಂದು ಕೊನೆಗೊಳ್ಳುತ್ತದೆ ಎಂದು ತನ್ನ ಅಧೀಕೃತ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

ಹುದ್ದೆಯ ವಿವರಗಳು

* ಸಹಾಯಕ ಎಂಜಿನಿಯರ್​ಗಳು: 81 ಹುದ್ದೆಗಳು

* ಸಹಾಯಕ ಆಡಳಿತ ಅಧಿಕಾರಿ : 410 ಹುದ್ದೆಗಳು

* ಸಹಾಯಕ ಆಡಳಿತ ಅಧಿಕಾರಿ : 350 ಹುದ್ದೆಗಳು

ಶೈಕ್ಷಣಿಕ ಮಾನದಂಡಗಳು

AE ಹುದ್ದೆಗಳಿಗೆ ಸಂಬಂಧಿತ ಎಂಜಿನಿಯರಿಂಗ್​ ವಿಭಾಗದಲ್ಲಿ ಪದವಿ ಕಡ್ಡಾಯವಾಗಿರಬೇಕು. AAO ಹುದ್ದೆಗಳಿಗೆ ವ್ಯವಹಾರ, ಲೆಕ್ಕಪತ್ರ ನಿರ್ವಹಣೆ, ಹಣಕಾಸು, ನಿರ್ವಹಣೆ ಅಥವಾ ಸಂಬಂಧಿತ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯಸ್ಸಿನ ಮಿತಿ

21 ರಿಂದ 30 ವರ್ಷಗಳ ನಡುವೆ (ಸರ್ಕಾರಿ ನಿಯಮಗಳ ಪ್ರಕಾರ SC/ST/BC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ).

ಅರ್ಜಿ ಶುಲ್ಕ

SC/ST/PWD : ರೂ.85 +ವಹಿವಾಟು ಶುಲ್ಕಗಳು + GST. ಇತರ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಮತ್ತು ಮಾಹಿತಿ ಶುಲ್ಕಗಳು ರೂ 700 +ವಹಿವಾಟು ಶುಲ್ಕಗಳು + GST

ಆಯ್ಕೆ ಪ್ರಕ್ರಿಯೆ

1. ಪೂರ್ವ ಭಾವಿ ಪರೀಕ್ಷೆ

2. ಮುಖ್ಯ ಪರೀಕ್ಷೆ

3. ಸಂದರ್ಶನ

4. ವೈದ್ಯಕೀಯ ಪರೀಕ್ಷೆ

ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ಸಂದರ್ಶನಕ್ಕೆ ಆಯ್ಕೆ ಮಾಡಲು ಪರಿಗಣಿಸಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಎಲ್​ಐಸಿ ಇಂಡಿಯಾದ ಅಧಿಕೃತ ವೆಬ್​ಸೈಟ್​ನ್ನು ಪರಿಶೀಲಿಸಬಹುದು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net