ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್​ ಬರುತ್ತದೆಯೇ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ...| Bras

untitled-design-2025-08-16t165712695-68a06b1f1fc86
Published on

Bras: ಸುಂದರವಾದ ಹಾಗೂ ತಮಾಷೆಯ ಒಳ ಉಡುಪು ಜಾಹಿರಾತುಗಳನ್ನು ನಿಮಗೆ ಎಷ್ಟೇ ತೋರಿಸಿದರೂ, ಬ್ರಾ ಧರಿಸುವುದ ಅತ್ಯಂತ ಸುಲಭದಾಯಕ ವಿಷಯವೇನಲ್ಲ. ಇದು ಕೆಲವೊಮ್ಮೆ, ಉಸಿರುಗಟ್ಟಿಸುವಂತೆ ಮಾಡುತ್ತದೆ. ಬಿಗಿಯಾದ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತದೆಯೇ? ಎಂಬುದು ದೀರ್ಘ ಕಾಲದಿಂದ ಚರ್ಚೆಯಾಗುತ್ತಿದೆ.

ಈ ವಿಷಯದ ಬಗ್ಗೆ ಭಯವು 1990ರ ದಶಕದಲ್ಲಿ "ಡ್ರೆಸ್ಡ್ ಟು ಕಿಲ್" ಎಂಬ ಪುಸ್ತಕದಿಂದ ಹುಟ್ಟಿಕೊಂಡಿತು. ಇದು ಬಿಗಿಯಾದ ಬ್ರಾ ಸ್ತನಗಳಲ್ಲಿ ರಕ್ತ ಪರಿಚಲನೆ ಮತ್ತು ದುಗ್ಧರಸ ವ್ಯವಸ್ಥೆಗೆ ಅಡ್ಡಿಯನ್ನು ಉಂಟುಮಾಡಿ, ವಿಷಕಾರಕ ಪದಾರ್ಥಗಳ ಸಂಗ್ರಹಕ್ಕೆ ಕಾರಣವಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಪುಸ್ತಕವು ವಾದಿಸಿತು. ಆದರೆ, ಈ ವಾದವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಲಿಲ್ಲ.

ಸಂಶೋಧನೆಗಳ ಪ್ರಕಾರ, ಬಿಗಿಯಾದ ಬ್ರಾ ಧರಿಸುವುದಕ್ಕೂ ಸ್ತನ ಕ್ಯಾನ್ಸರ್​ಗೂ ಯಾವುದೇ ಸಂಬಂಧವಿಲ್ಲ. 2014ರಲ್ಲಿ ಕ್ಯಾನ್ಸರ್ ಎಪಿಡೆಮಿಯಾಲಜಿ, ಬಯೋಮಾರ್ಕರ್ಸ್ ಮತ್ತು ಪ್ರಿವೆನ್ಷನ್ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಸಂಶೋಧನೆಯು 1,500ಕ್ಕೂ ಹೆಚ್ಚು ಮಹಿಳೆಯರನ್ನು ಒಳಗೊಂಡಿತು. ಈ ಅಧ್ಯಯನವು ಬ್ರಾದ ಗಾತ್ರ, ಧರಿಸುವ ಸಮಯ, ವೈರ್‌ಗಳಿರುವ ಬ್ರಾ ಅಥವಾ ಬಿಗಿಯಾದ ಬ್ರಾದಿಂದ ಸ್ತನ ಕ್ಯಾನ್ಸರ್‌ಗೆ ಯಾವುದೇ ಸಂಬಂಧವಿಲ್ಲ ಎಂದು ವರದಿ ಮಾಡಿತು.

ಸ್ತನ ಕ್ಯಾನ್ಸರ್‌ಗೆ ಮುಖ್ಯ ಅಪಾಯಕಾರಿ ಅಂಶಗಳೆಂದರೆ, ಜನನಾಂಗ ಕಾರಣಗಳು, ಹಾರ್ಮೋನ್‌ಗಳ ಬದಲಾವಣೆ, ವಯಸ್ಸು, ಕುಟುಂಬದ ಇತಿಹಾಸ, ಮತ್ತು ಜೀವನಶೈಲಿ ಅಂದರೆ, ಧೂಮಪಾನ, ಮದ್ಯಪಾನ, ದೈಹಿಕ ಚಟುವಟಿಕೆಯ ಕೊರತೆಯಿಂದ ಒಳಗೊಂಡಿವೆ.

ಬಿಗಿಯಾದ ಬ್ರಾ ಲಿಂಫ್ಯಾಟಿಕ್ ವ್ಯವಸ್ಥೆಯ ಮೇಲೆ ಕೆಲವೊಮ್ಮೆ ಒತ್ತಡವನ್ನು ಉಂಟುಮಾಡುತ್ತವೆ. ಇದು ಕ್ಯಾನ್ಸರ್​ಗೆ ಕಾರಣವಾಗುವಷ್ಟು ಗಂಭೀರವಲ್ಲ ಎಂದು ವರದಿಗಳು ತಿಳಿಸಿವೆ.

ಬ್ರಾ ಧರಿಸುವುದರಿಂದ ಆಗುವ ಅನಾನುಕೂಲಗಳೇನು?

ಬಿಗಿಯಾದ ಬ್ರಾ ಧರಿಸುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳನ್ನು ಮಹಿಳೆಯರು ಅನುಭವಿಸಬಹುದು. ಚರ್ಮದ ಕಿರಿಕಿರಿ, ಭುಜದ ನೋವು, ಅಥವಾ ರಕ್ತ ಪರಿಚಲನೆಯಲ್ಲಿ ತಾತ್ಕಾಲಿಕ ಅಡಚಣೆ, ಗಾಯಗಳಾಗುವುದು ಆದರಿಂದ ಸರಿಯಾದ ಗಾತ್ರದ ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ.

ವೈದ್ಯರೇನು ಹೇಳಿದ್ದಾರೆ?

ವೈದ್ಯರ ಪ್ರಕಾರ, ಬಿಗಿಯಾದ ಬಟ್ಟೆಗಳನ್ನು ರಾತ್ರಿಯ ವೇಳೆ ಧರಿಸದಿರುವುದು ಒಳ್ಳೆಯದು, ಇದು ಚರ್ಮ ಹಾಗೂ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ. ಇನ್ನು ಸ್ತನ ಕ್ಯಾನ್ಸರ್​ಗಳನ್ನು ತಡೆಗಟ್ಟಲು ಬ್ರಾದ ಬಗ್ಗೆ ಆತಂಕಕ್ಕಿಂತ, ನಿಯಮಿತ ಸ್ವ-ಪರೀಕ್ಷೆ, ಮ್ಯಾಮೊಗ್ರಾಮ್, ಮತ್ತು ವೈದ್ಯರ ಸಲಹೆಯನ್ನು ಪಾಲಿಸುವುದು ಮುಖ್ಯ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net