ಗ್ರಂಥಾಲಯ ಜ್ಞಾನ ದಾಸೋಹದ ಮನೆ

Published on

ಬಾಗೇಪಲ್ಲಿ: ಜಗತ್ತನ ಬೆಳಗಲು ಸೂರ್ಯನ ಬೆಳಕು ಬೇಕು. ಹಾಗೆಯೇ ಮನುಷ್ಯನ ಬಾಳು ಬೆಳಗಲು ಪುಸ್ತಕಗಳ ಭಂಡಾರಬೇಕು ಎಂದು ನ್ಯಾಷನಲ್​ ಕಾಲೇಜ್​ ಪ್ರಾಂಶುಪಾಲ ಇಂತಿಯಾಜ್​ ಅಹಮದ್​ ಮುಬೀನ್​ ತಿಳಿಸಿದರು.

ಪಟ್ಟಣದ ನ್ಯಾಷನಲ್​ ಕಾಲೇಜು ಗ್ರಂಥಾಲಯ ಕಟ್ಟಡದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಪಾಲಕರ ದಿನ ಉದ್ಘಾಟಿಸಿ ಮಾತನಾಡಿ, ದೇಶದ ಸಂಪತ್ತು ಸುಸ್ಥಿರಗಾಗಿ ಯುವ ಜನತೆ ಸಕ್ರಿಯವಾಗಿ ಭಾಗವಹಿಸಬೇಕು. ಓದು ಹವ್ಯಾಸ ಜಗತ್ತಿನ ಎಲ್ಲೆಡೆ ಮಾನ್ಯವಾಗುತ್ತದೆ ಮತ್ತು ಪುಸ್ತಕಗಳು ಉತ್ತಮ ಗೆಳೆಯರಿದ್ದಂತೆ, ಗ್ರಂಥಗಳಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ ಎಂಬ ನಾಣ್ಣುಡಿಯಂತೆ ಗ್ರಂಥಗಳನ್ನು ಹೊಂದಿ ಆತ್ಮವನ್ನು ಇಟ್ಟುಕೊಳ್ಳಬೇಕು. ಆಧುನಿಕ ಯುಗದಲ್ಲಿ ಜ್ಞಾನಾರ್ಜನೆಗೆ ಪುಸ್ತಕಗಳು ಮತ್ತು ಗ್ರಂಥಾಲಯ ಪ್ರಮುಖ ಪಾತ್ರವಹಿಸುತ್ತದೆ ಎಂದರು. ನ್ಯಾಷನಲ್​ ಕಾಲೇಜಿನ ಗ್ರಂಥಪಾಲ ಟಿ.ಎನ್​.ಜಯರಾಮ್​ ರೆಡ್ಡಿ ಮಾತನಾಡಿ, ಮಾನವ ವಿಕಾಸಕ್ಕೆ ಸಾಹಿತ್ಯ, ಇತಿಹಾಸ, ಪುರಾಣ, ವಿಜ್ಞಾನ, ಕಲೆ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಪರಮಾರ್ಥಿಕ ತತ್ವಗಳ, ವ್ಯಕ್ತೀಜಿವನ ಚರಿತ್ರೆಗಳು, ಒಳ್ಳೆಯ ಪುಸ್ತಕಗಳು ಆತ್ಮೀಯ ಮಿತ್ರರಿದ್ದಂತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net