ವೈಜ್ಞಾನಿಕವಾಗಿ ಪರಿಹಾರ ನೀಡಲಿ

Published on

ಮದ್ದೂರು: ಒಣಗಿರುವ ಕಬ್ಬಿನ ಬೆಳೆಗೆ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ತಾಲೂಕಿನ ಚನ್ನಸಂದ್ರ ಗ್ರಾಮದಲ್ಲಿ ಕಬ್ಬು ಬೆಳೆಗಾರ ಲಕ್ಷ್ಮಣ್ ಚನ್ನಸಂದ್ರ ಕಬ್ಬಿನ ಗದ್ದೆಯಲ್ಲಿ ಬಾಯಿ ಬಡಿದುಕೊಂಡು ಏಕಾಂಗಿಯಾಗಿ ಸೋಮವಾರ ಪ್ರತಿಭಟನೆ ನಡೆಸಿದರು.

ಒಣಗಿದೆ ಎಂಬ ಕಾರಣಕ್ಕೆ ಕಬ್ಬಿನ ಬೆಳೆಯನ್ನು ಅಧಿಕಾರಿಗಳು ಸರ್ವೇ ಮಾಡಿಲ್ಲ. ಅಲ್ಲದೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಂದಾಜು 2 ಲಕ್ಷ ರೂ. ಖರ್ಚು ಮಾಡಿ 3 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಇನ್ನೆರಡು ತಿಂಗಳು ಕಳೆದಿದ್ದರೆ ಅಂದಾಜು 6 ಲಕ್ಷ ರೂ. ಕೈ ಸೇರುತ್ತಿತ್ತು. ಆದರೆ ಬರಗಾಲ ಮತ್ತು ಕೆ.ಆರ್.ಎಸ್.ನಿಂದ ಬೆಳೆಗೆ ನೀರು ಹರಿಸದ ಪರಿಣಾಮ ಬೆಳೆ ಸಂಪೂರ್ಣ ಒಣಗಿ ನಿಂತಿದೆ. ಇದರಿಂದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಹೇಳಿದರು.

ಈ ಕೂಡಲೇ ಸರ್ಕಾರ ಒಣಗಿರುವ ಕಬ್ಬಿನ ಬೆಳೆಗೆ ವೈಜ್ಞಾನಿಕ ಪರಿಹಾರ ಕೊಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net