ಹಬ್ಬದ ನಿಜಾರ್ಥ ಅರಿಯೋಣ ಬೆಳಕಿನತ್ತ ಸಾಗೋಣ

Deepavani new
Published on

| ವಿನೋದ ಕಾಮತ್

ನಾವು ವರ್ಷಾನುವರ್ಷಗಳಿಂದ ಕೇವಲ ಒಂದು ರೂಢಿ ಎಂದು ದೀಪಾವಳಿಯನ್ನು ಆಚರಿಸುತ್ತಿದ್ದೇವೆ. ಇಂದು ಅದರ ಗೂಢಾರ್ಥವು ಲೋಪವಾಗಿದೆ. ಈ ಗೂಢಾರ್ಥವನ್ನು ತಿಳಿದುಕೊಂಡು ಅದರಿಂದ ಅಭಿಮಾನ ಜಾಗೃತವಾದಲ್ಲಿ ಅಜ್ಞಾನರೂಪೀ ಅಂಧಃಕಾರದ ಪ್ರಾಬಲ್ಯ ಕಡಿಮೆಯಾಗಿ ಸಜ್ಜನಶಕ್ತಿ ಮೇಲಿನ ಅವರ ವರ್ಚಸ್ಸು ಕಡಿಮೆಯಾಗುವುದು. ಅಂಧಃಕಾರದಿಂದ ಜ್ಯೋತಿಯೆಡೆಗೆ ಅಂದರೆ ಪ್ರಕಾಶದೆಡೆಗೆ ಹೋಗು ಎನ್ನುವುದು ಶ್ರುತಿಯ ಆಜ್ಞೆಯಾಗಿದೆ. ‘ತಮಸೋ ಮಾ ಜ್ಯೋತಿರ್ಗಮಯ’ | ದೀಪದಾನದಿಂದ ಲಕ್ಷ್ಮೀಯು ಸ್ಥಿರವಾಗುತ್ತಾಳೆ.

ಮನೆಯಲ್ಲಿ ಯಾವಾಗಲೂ ಲಕ್ಷ್ಮೀಯ ವಾಸ ಮತ್ತು ಜ್ಞಾನದ ಪ್ರಕಾಶವಿರಬೇಕೆಂದು ಪ್ರತಿಯೊಬ್ಬರೂ ಆನಂದದಿಂದ ದೀಪಾವಳಿ ಉತ್ಸವವನ್ನು ಆಚರಿಸಬೇಕು. ಇದರಿಂದ ಮನೆಯಲ್ಲಿ ಸುಖಸಮೃದ್ಧಿ ಇರುತ್ತದೆ. ಆಕಾಶದೀಪ ದೀಪಾಲಂಕಾರದ ಒಂದು ಭಾಗವಾಗಿದೆ.

ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ |

ಪ್ರದೀಪಂ ತೇ ಪ್ರಯಚ್ಛಾಮಿ ನಮೋನಂತಾಯ ವೇಧಸೇ ||

ಅರ್ಥ: ಶ್ರೇಷ್ಠ ಪರಮೇಶ್ವರನಾದ ದಾಮೋದರನಿಗೆ ಈ ಜ್ಯೋತಿಸಹಿತ ಆಕಾಶದೀಪವನ್ನು ಅರ್ಪಿಸುತ್ತೇನೆ. ಆ ತೇಜಸ್ವೀ ಅನಂತನಿಗೆ ನಾನು ನಮಸ್ಕರಿಸುತ್ತೇನೆ. ಇದರ ಫಲವು ಲಕ್ಷ್ಮೀಪ್ರಾಪ್ತಿಯಾಗಿದೆ.

ಮನೆಯ ಹೊರಗೆ ತೂಗಾಡಿಸಿದ ಆಕಾಶದೀಪದಲ್ಲಿನ ತೇಜತತ್ತ ್ವದ ಲಹರಿಗಳು ಪಾತಾಳದಿಂದ ಮನೆಯೊಳಗೆ ಬರುವ ಆಪಮಯ ಲಹರಿಗಳನ್ನು ತಡೆಯುತ್ತವೆ. ಹಾಗಾಗಿ ಮನೆಯ ಹೊರಗೆ ಆಕಾಶದೀಪವನ್ನು ಹಾಕುತ್ತಾರೆ. ದೀಪಾವಳಿ ಸಮಯದಲ್ಲಿ ಬ್ರಹ್ಮಾಂಡದಲ್ಲಿ ಕೆಟ್ಟ ಘಟಕಗಳ ನಿಮೂಲನೆಗಾಗಿ ಶ್ರೀಲಕ್ಷ್ಮಿತತ್ತ ್ವಾರ್ಯನಿರತವಾಗಿರುತ್ತದೆ. ಈ ತತ್ತ ್ವದ ಲಾಭ ಪಡೆಯಲು ಪಂಚತತ ್ತ್ವ ಎಲ್ಲ ಸ್ತರಗಳನ್ನು ಒಂದು ಕಡೆ ಮಾಡಿ ಅದಕ್ಕೆ ವಾಯುತತ್ತ ್ವದ ಗತಿಮಾನತೆಯ ಆಕರ್ಷಣೆಯಿಂದ ಆಕಾಶ ಟೊಳ್ಳಿನ ಸಂಚಾರದಿಂದ ಗ್ರಹಣ ಮಾಡಲಾಗುತ್ತದೆ. ಇದಕ್ಕಾಗಿ ಆಕಾಶದೀಪ ಮನೆಯ ಹೊರಗೆ ಎತ್ತರದ ಸ್ಥಳದಲ್ಲಿ ಹಾಕಲಾಗುತ್ತದೆ. ಇದರಿಂದ ಬ್ರಹ್ಮಾಂಡದಲ್ಲಿ ಸಂಚಾರವಾಗುವ ತತ್ತ ್ವದ ಲಾಭವಾಗುತ್ತದೆ.

ದೀಪಾವಳಿ ಸಮಯದಲ್ಲಿ ಮನೆಯ ಮುಂದೆ ಅಂಗಳದಲ್ಲಿ ಮತ್ತು ಬಾಗಿಲಿನ ಮುಂದೆ ಬಹಳ ಉತ್ಸಾಹದಿಂದ ರಂಗೋಲಿಯನ್ನು ಬಿಡಿಸುತ್ತಾರೆ. ದೀಪಾವಳಿಯಲ್ಲಿ ಪ್ರೇಮದ ಕೊಡುಕೊಳ್ಳುವಿಕೆಯಾಗಬೇಕೆಂದು ಸಂಬಂಧಿಕರು, ಮಿತ್ರರು ಮುಂತಾದವರಿಗೆ ಸಿಹಿತಿಂಡಿಯ ಪೆಟ್ಟಿಗೆಗಳನ್ನು ಉಡುಗೊರೆಯೆಂದು ನೀಡಲಾಗುತ್ತದೆ. ಕೆಲವು ಸಲ ಪೆಟ್ಟಿಗೆಗಳ ಹೊದಿಕೆಗಳ ಮೇಲೆ ದೇವತೆಗಳ ಚಿತ್ರ ಅಥವಾ ಹೆಸರುಗಳಿರುತ್ತವೆ. ಬಹುತೇಕ ಸಂದರ್ಭದಲ್ಲಿ ಖಾಲಿಯಾದ ನಂತರ ಈ ಪೆಟ್ಟಿಗೆಗಳನ್ನು ಕಸದಲ್ಲಿ ಎಸೆಯಲಾಗುತ್ತದೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ದೇವತೆಯ ಚಿತ್ರ ಅಥವಾ ರೂಪವಿದ್ದಲ್ಲಿ ದೇವತೆಯ ತತ ್ತ್ವರುತ್ತದೆ, ಅಂದರೆ ಸೂಕ್ಷ ್ಮಲ್ಲಿ ದೇವತೆಯ ಅಸ್ತಿತ್ವವಿರುತ್ತದೆ. ಆದ್ದರಿಂದ ಮೇಲಿನ ಪ್ರಕಾರಗಳಿಂದ ದೇವತೆಗಳ ವಿಡಂಬನೆಯೇ ಆಗುತ್ತದೆ. ಇದರಿಂದ ದೇವತೆಗಳ ಅವಕೃಪೆಯಾಗುತ್ತದೆ. ಇದೇ ರೀತಿಯಲ್ಲಿ ರಾಷ್ಟ್ರಪುರುಷರ ವಿಡಂಬನೆಯೂ ಆಗುತ್ತಿರುತ್ತದೆ. ಇದಕ್ಕಾಗಿ, ಇಂತಹ ಅಧರ್ವಚರಣೆಯನ್ನು ಸ್ವತಃ ತಡೆಗಟ್ಟಿ, ಇದರ ಬಗ್ಗೆ ಇತರರಿಗೂ ಪ್ರಬೋಧನೆ ಮಾಡಿರಿ! ದೀಪಾವಳಿ ನಿಜವಾದ ಅರ್ಥದಲ್ಲಿ ಬೆಳಕನ್ನು ತರಲಿ, ಸನ್ಮಂಗಳವನ್ನು ಉಂಟುಮಾಡಲಿ.

(ಲೇಖಕರು ಸನಾತನ ಸಂಸ್ಥೆಯ ರಾಜ್ಯ ವಕ್ತಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net