More

    ಬೆಳಕಿನ ಹಬ್ಬ ದೀಪಾವಳಿಯಂದು ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು…

    ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯು ಭಾರತೀಯ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬರಲ್ಲಿಯೂ ಸಮಾನತೆಯನ್ನು ಸೂಚಿಸುತ್ತದೆ. ಬೆಳಕು ಹಾಗೂ ಸಂತೋಷದ ಪ್ರತೀಕವಾಗಿರುವ ದೀಪಾವಳಿ ದುಷ್ಟರ ಮೇಲೆ ದೈವದ ವಿಜಯ, ಅಜ್ಞಾನದ ಮೇಲೆ ಜ್ಞಾನದ ವಿಜಯ ಹಾಗೂ ಕತ್ತಲೆಯಿಂದ ಆವೃತ್ತವಾಗಿರುವ ಜಗತ್ತನ್ನು ಬೆಳಕಿನೆಡೆಗೆ ಕರೆದೊಯ್ಯುವುದರ ಸಂಕೇತವಾಗಿದೆ.

    5 ದಿನಗಳವರೆಗೆ ಸಂಭ್ರಮಿಸಲ್ಪಡುವ ದೀಪಾವಳಿಯು ಪ್ರತಿ ದಿನವು ಒಂದೊಂದು ವಿಶೇಷತೆಯನ್ನು ಹೊಂದಿದೆ. ದೇಶದಾದ್ಯಂತ ದೀಪಾವಳಿಯನ್ನು ಒಂದೊಂದು ಹೆಸರಿನಲ್ಲಿ ಆಚರಿಸಿದರು ಸಂಭ್ರಮ ಒಂದೇ ಅಲ್ಲವೇ. ಈ ಬಾರಿ ನ.12 ಪ್ರಾರಂಭವಾಗುವ ಹಬ್ಬಕ್ಕೆ ಪಟಾಕಿಗಳನ್ನು ನಿಷೇಧಿಸಿ ದೀಪ ಹಾಗೂ ಬಣ್ಣಗಳಿಂದ ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಎಲ್ಲರೂ ಸಜ್ಜಾಗಿದ್ದಾರೆ.

    ಈ ಶುಭ ದಿನದಂದು ಸ್ನೇಹಿತರಿಗೆ,ಕುಟುಂಬಸ್ಥರಿಗೆ ಹಾಗೂ ತಮ್ಮ ಪ್ರೀತಿ ಪಾತ್ರರಿಗೆ ಈ ರೀತಿಯ ವಿಶೇಷ ಹಾಗೂ ಹೃದಯಸ್ಪರ್ಶಿ ಸಂದೇಶಗಳನ್ನು ಹಂಚಿಕೊಳ್ಳುವುದರ ಮೂಲಕ ದೀಪಾವಳಿಯನ್ನು ಇನ್ನೂ ಹೆಚ್ಚು ಸಂದರ ಮತ್ತು ಸಂತೋಷದಾಯಕವಾಗಿ ಮಾಡಿ.

    ದೀಪಾವಳಿಯ ದೀಪಗಳು ನಿಮ್ಮ ಜೀವನವನ್ನು ಬೆಳಗಿಸಲಿ, ರಂಗೋಲಿಯ ಬಣ್ಣಗಳು ಸಂತೋಷವನ್ನು ಹೊತ್ತುತರಲಿ. ರುಚಿಯಾದ ಸಿಹಿ ತಿಂಡಿಗಳು ನಿಮ್ಮ ಜೀವನವನ್ನು ಸಿಹಿಯಾಗಿಸಲಿ, ತಾಯಿ ಲಕ್ಷ್ಮಿ ದೇವಿಯು ನಿಮ್ಮ ಇಷ್ಟಾರ್ಥಗಳನ್ನೆಲ್ಲಾ ಈಡೇರಿಸಲಿ. ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

    ಈ ದೀಪಾವಳಿ ನಿಮ್ಮ ಬದುಕಿನಲ್ಲಿ ಖುಷಿಯ ಬೆಳಕನ್ನು ತುಂಬಲಿ. ಸಂತೋಷ, ಸಮೃದ್ಧಿ, ಶಾಂತಿ, ನೆಮ್ಮದಿಯನ್ನು ಹೊತ್ತು ತರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳು.

    ತಾಯಿ ಲಕ್ಷ್ಮಿಯು ನಿಮ್ಮ ಎಲ್ಲಾ ಕಷ್ಟದಲ್ಲು ಸಾಕಷ್ಟು ಕಲಿತು ಮುನ್ನುಗ್ಗಿ ಜಯಗಳಿಸುವ ಧೈರ್ಯವನ್ನು ನೀಡಲಿ.ಈ ದೀಪಾವಳಿ ನಿಮ್ಮ ಬದುಕಿನ ಈ ಎಲ್ಲಾ ಕಷ್ಟಗಳನ್ನು ದೂರ ಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು.

    ನೀವು ಹಚ್ಚುವ ಒಂದೊಂದು ದೀಪವೂ ನಿಮ್ಮ ಜೀವನದ ಎಲ್ಲಾ ಕಷ್ಟಗಳನ್ನು ಸುಟ್ಟು ಹಾಕಲಿ, ಖುಷಿಯೊಂದೇ ನಿಮ್ಮ ಬದುಕಿನಲ್ಲಿ ತುಂಬಿರಲಿ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಬೆಳಕಿನ ಹಬ್ಬದ ಶುಭಾಶಯಗಳು.

    ಕರುಣಾಮಯಿ ದೇವರು ಈ ದೀಪಾವಳಿಯ ಶುಭ ಸಂದರ್ಭದಲ್ಲಿ ಆರೋಗ್ಯ, ಆಯುಷ್ಯ, ಸಂತೋಷ, ಶಾಂತಿಯನ್ನು ನಿಮಗೆ ಆಶೀರ್ವದಿಸಲಿ. ಎಲ್ಲರಿಗೂ ಶುಭವ ತರಲಿರುವ ದೀಪಾವಳಿ ಮುಖದಲ್ಲಿದ್ದ ನೋವು ಮರೆಯಾಗಲಿ, ಕಣ್ಣೀರಿಟ್ಟಿದ್ದ ಕಣ್ಣುಗಳಲ್ಲಿ ಖುಷಿ ತುಂಬಲಿ, ಕಷ್ಟಗಳು ಮಂಜಿನಂತೆ ಕರಗಲಿ, ದೀಪಗಳ ಪ್ರಭೆ ಮನೆ ತುಂಬಾ ಖುಷಿಯ ಹೂ ಚೆಲ್ಲಲಿ.ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.

    ಕತ್ತಲೆ ಮತ್ತು ಅಜ್ಞಾನದಿಂದ ಮನಸ್ಸನ್ನು ಶುದ್ಧೀಕರಿಸಿ ಒಳಿತನ್ನು ತುಂಬುವುದೇ ದೀಪಾವಳಿಯ ಮಹತ್ವ. ಬೆಳಕಿನ ಜ್ವಾಲೆಯು ಹೃದಯ, ಆತ್ಮ ಮತ್ತು ಮನಸ್ಸನ್ನು ಶುದ್ಧೀಕರಿಸಲಿ. ದೀಪಾವಳಿಯ ಶುಭಾಶಯಗಳು.

    ದೀಪದಿಂದ ದೀಪ ಬೆಳಗುವಂತೆ, ಪ್ರೀತಿಯಿಂದಲೇ ಪ್ರೀತಿ ಹರಡುವುದು, ದ್ವೇಷ, ಕೋಪ ನಶಿಸಲಿ, ಪ್ರೀತಿ ಮೂಡಲಿ, ದೀಪಾವಳಿ ಹಬ್ಬದ ಶುಭಾಶಯಗಳು. ಬದುಕಿಗೆ ದಾರಿದೀಪ ಅಭಿವೃದ್ಧಿಗೆ ಆಶಾದೀಪ ಸಾಧನೆಗೆ ಸ್ಫೂರ್ತಿ ದೀಪ, ನಗು ನಲಿವಿಗೆ ನಂದಾದೀಪವ ಈ ದೀಪಾವಳಿ, ಕಷ್ಟದ ಕತ್ತಲೆ ಕಳೆದು ಸಮೃದ್ಧಿಯ ಬೆಳಕು ತರಲಿ.

    ಜಗದ ಸುತ್ತಲು ಬರಿಯ ಕತ್ತಲು. ಸರಿಯಲಿ ಮನದ ದುಗುಡ ದುಮ್ಮನ, ಸುರಿಯಲಿ ಬಳಲಿದ ಮನಗಳಿಗೆ ಬೆಳಕಿನ ಸನ್ಮಾನ, ದೀಪಾವಳಿಯ ಶುಭಾಷಯಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts