More

    ದೀಪಾವಳಿ ಹಬ್ಬಕ್ಕೆ ಮಾಡಿ ಸಿಹಿಯಾದ ಲಡ್ಡು, ಅಕ್ಕಿ ಪಾಯಸ

    ದೀಪಾವಳಿ ಹಬ್ಬವೆಂದರೆ ಅದು ಬೆಳಕಿನ ಹಬ್ಬ. ಸಮೃದ್ಧಿ, ಸಂತೋಷ, ಶಾಂತಿ ಮತ್ತು ಸಂಪತ್ತನ್ನು ಆಶೀರ್ವದಿಸುವಂತೆ ಕೇಳಿಕೊಳ್ಳುತ್ತಾರೆ. ದೇಶದ ಬಹುತೇಕ ಸ್ಥಳಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಇನ್ನೂ ಕೆಲವು ಕಡೆ ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.
    ದೀಪಾವಳಿ ಹಬ್ಬವನ್ನು ಆಚರಿಸಲು ಹಲವಾರು ಸಂಪ್ರದಾಯಗಳಿವೆ. ಸಿಹಿ ತಿನಿಸುಗಳನ್ನು ತಯಾರಿಸಿ ಹಂಚಿಕೊಳ್ಳುವುದೂ ಒಂದು. ಹಾಗಾದರೆ ಹಬ್ಬಕ್ಕೆ ಲಡ್ಡು ಮತ್ತು ಪಾಯಸವನ್ನು ಮಾಡುವ ವಿಧಾನವನ್ನು ತಿಳಿಯೋಣ ಬನ್ನಿ.

    ಕಡಲೆ ಹಿಟ್ಟಿನ ಲಡ್ಡು ಮಾಡುವ ವಿಧಾನ:
    ಬೇಕಾಗಿರುವ ಸಾಮಗ್ರಿಗಳು
    ಕಡಲೇ ಹಿಟ್ಟು – ಒಂದು ಕಪ್
    ಬೆಲ್ಲ – ಅರ್ಧ ಕಪ್
    ತುಪ್ಪ – ಅರ್ಧ ಕಪ್
    ಏಲಕ್ಕಿ ಪುಡಿ – ಅರ್ಧ ಚಮಚ
    ಒಣದ್ರಾಕ್ಷಿ, ಬಾದಾಮಿ ಸ್ವಲ್ಪ ಪ್ರಮಾಣ

    ಮಾಡುವ ವಿಧಾನ:
    ಮೊದಲಿಗೆ ದೊಡ್ಡ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಕಡಲೆ ಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಹುರಿಯಿರಿ. ಮಿಶ್ರಣ ಒಣ ಎನಿಸಿದರೆ ಇನ್ನಷ್ಟು ತುಪ್ಪ ಸೇರಿಸಬಹುದು.

    20 ನಿಮಿಷಗಳ ಬಳಿಕ ಹಿಟ್ಟು ತುಪ್ಪವನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಹಿಟ್ಟು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.

    ಕಡಲೇ ಹಿಟ್ಟು ಸ್ವಲ್ಪ ಬಣ್ಣ ಬಂದ ನಂತರ, ಬೆಲ್ಲವನ್ನು ಹಾಕಿ ಕರಗಿಸಿ.

    ಬೆಲ್ಲ ಕರಗಿದ ನಂತರ, ಏಲಕ್ಕಿ ಪುಡಿಯನ್ನು ಸೇರಿಸಿ.ಲಡ್ಡುಗಳನ್ನು ಸಣ್ಣದಾಗಿ ಮಾಡಿ. ಸ್ವಲ್ಪ ಒಣದ್ರಾಕ್ಷಿ, ಬಾದಾಮಿಗಳನ್ನು ಲಡ್ಡುಗಳ ಮೇಲೆ ಸೇರಿಸಿ ಉಂಡೆ ಮಾಡಿದರೆ ರುಚಿಕರವಾದ ಲಡ್ಡು ತಯಾರಾಗಿರುತ್ತದೆ.

    ಪಾಯಸ ಮಾಡುವ ವಿಧಾನ:
    ಬೇಕಾಗುವ ಸಾಮುಗ್ರಿಗಳು
    ಹಾಲು – ಒಂದು ಲೀಟರ್
    ಬಾಸುಮತಿ ಅಕ್ಕಿ – ಅರ್ಧ ಕಪ್
    ಸಕ್ಕರೆ – ಅರ್ಧ ಕಪ್
    ಏಲಕ್ಕಿ ಪುಡಿ – ಅರ್ಧ ಚಮಚ
    ತುಪ್ಪ – ಅರ್ಧ ಚಮಚ
    ಗೋಡಂಬಿ, ಒಣದ್ರಾಕ್ಷಿ – ಸ್ವಲ್ಪ ಪ್ರಮಾಣ

    ಮಾಡುವ ವಿಧಾನ:
    ದೊಡ್ಡ ಕಡಾಯಿಯಲ್ಲಿ ಹಾಲನ್ನು ಕುದಿಸಿ.ಅದಕ್ಕೆ ಅಕ್ಕಿಯನ್ನು ಹಾಕಿ ಮತ್ತು ಅಕ್ಕಿ ಚೆನ್ನಾಗಿ ಬೇಯುವವರೆಗೆ 20 ನಿಮಿಷಗಳ ಕಾಲ ಕುದಿಸಿ.

    ನಂತರ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ, ಸಕ್ಕರೆ ಕರಗುವವರೆಗೆ ಕುದಿಸಿ.

    ತುಪ್ಪ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಘಮ ಘಮ ರುಚಿಯಾದ ಅಕ್ಕಿ ಪಾಯಸ ಸವಿಯಲು ಸಿದ್ಧವಾಗಿತುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts