ಎಲ್ಲರಲ್ಲೂ ಇರಲಿ ಪರೋಪಕಾರ ಬುದ್ಧಿ

rpt
ಕ್ರಿಸ್‌ಮಸ್ ಅಂಗವಾಗಿ ರಿಪ್ಪನ್‌ಪೇಟೆಯ ಗುಡ್ ಶೆಫರ್ಡ್ ಚರ್ಚ್‌ನಲ್ಲಿ ನಿರ್ಮಿಸಿರುವ ಗೋದಲಿ.
Published on

ರಿಪ್ಪನ್‌ಪೇಟೆ: ಕೊಟ್ಟಿಗೆಯಲ್ಲಿ ಜನಿಸಿದ ಯೇಸುಕ್ರಿಸ್ತರು ಹುಟ್ಟು ಕನಿಷ್ಠವಾದರೂ ಬಾಳು ಬೆಳಕಾಗಿರಬೇಕು ಎಂಬ ಸಂದೇಶವನ್ನು ಬಿಟ್ಟುಹೋಗಿದ್ದಾರೆ ಎಂದು ಗುಡ್ ಶೆಫರ್ಡ್ ಚರ್ಚ್‌ನ ರೆ.ಫಾ.ಬಿನೋಯ್ ಹೇಳಿದರು.

ಪಟ್ಟಣದ ಗುಡ್ ಶೆಫರ್ಡ್ ಚರ್ಚ್ ಆವರಣದಲ್ಲಿ ಮಂಗಳವಾರ ಕ್ರಿಸ್‌ಮಸ್ ಹಬ್ಬದ ಸಂದೇಶ ನೀಡಿದ ಅವರು, ಪ್ರತಿಯೊಬ್ಬರೂ ಪರೋಪಕಾರವನ್ನು ಬಯಸಬೇಕು. ಹಬ್ಬ-ಹರಿದಿನಗಳಾದಾಗ ಪಕ್ಕದ ಮನೆಯವರನ್ನೂ ಕರೆದು ನಿಮ್ಮೊಂದಿಗೆ ಸೇರಿಸಿಕೊಂಡು ಸತ್ಕಾರ ನೀಡಿ ಅವರನ್ನು ಸಂತೋಷ ಪಡಿಸಬೇಕು ಎಂದರು.

ನೆರೆಹೊರೆಯವರಿಗೆ ಕಷ್ಟಗಳು ಬಂದಾಗ ನೆರವು ನೀಡಿ ಸಹಕರಿಸಿ. ಇಲ್ಲಿ ಜಾತಿ, ಮತ, ಪಂಥಗಳ ಭೇದವಿಲ್ಲ. ಮನುಷ್ಯರೆಲ್ಲರೂ ಒಂದೇ. ಅವರಲ್ಲಿರುವ ಭಾವಗಳು ಒಂದೇ. ಕ್ರೋಧ, ಹಿಂಸೆಗಳನ್ನು ತೊರೆದು ಭ್ರಾತ್ವತ್ವ ಭಾವನೆ ಬೆಳೆಸಿಕೊಂಡು ದೇಶದ ಹಿರಿಮೆಯನ್ನು ಹೆಚ್ಚಿಸಬೇಕು. ಸಮಾನತೆ ಭಾವದಿಂದ ಸರ್ವರೂ ಸಮಾಗಮವಾದಾಗ ನೆಮ್ಮದಿ ಪ್ರಾಪ್ತಿಯಾಗುತ್ತದೆ ಎಂಬುದು ಜೀಸಸ್‌ನ ಉಪದೇಶ. ಎಲ್ಲರೂ ಇದನ್ನು ಪಾಲಿಸಿ ನೆಮ್ಮದಿಯ ಜೀವನ ಸಾಗಿಸಿ ಎಂದು ತಿಳಿಸಿದರು. ಸಮೀಪದ ಅರಸಾಳಿನ ಫಾತಿಮಾ ಚರ್ಚ್‌ನಲ್ಲಿ ಧಾರ್ಮಿಕ ಸಭೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net