ಕೊನೆ ಹಂತದವರೆಗೆ ನೀರು ತಲುಪಲಿ

ಮುನವಳ್ಳಿ ಸಮೀಪದ ಮಲಪ್ರಭಾ ಜಲಾಶಯಕ್ಕೆ ಶಾಸಕರಾದ ವಿಶ್ವಾಸ ವೈದ್ಯ, ಎನ್​.ಎಚ್​.ಕೋನರೆಡ್ಡಿ, ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಹಾಮಂಡಳದ ಅಧ್ಯ ಸದಾಶಿವಗೌಡ ಪಾಟೀಲ ಬಾಗಿನ ಅರ್ಪಿಸಿದರು.
ಮುನವಳ್ಳಿ ಸಮೀಪದ ಮಲಪ್ರಭಾ ಜಲಾಶಯಕ್ಕೆ ಶಾಸಕರಾದ ವಿಶ್ವಾಸ ವೈದ್ಯ, ಎನ್​.ಎಚ್​.ಕೋನರೆಡ್ಡಿ, ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಹಾಮಂಡಳದ ಅಧ್ಯ ಸದಾಶಿವಗೌಡ ಪಾಟೀಲ ಬಾಗಿನ ಅರ್ಪಿಸಿದರು.
Published on
ಮುನವಳ್ಳಿ: ವರುಣನ ಕೃಪೆಯಿಂದ ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ರೈತರಲ್ಲಿ ಸಂತಸ ಮನೆಮಾಡಿದೆ. ಆದರೆ, ಬಹುತೇಕ ಕಡೆ ಕಾಲುವೆ ದುರಸ್ತಿಯಲ್ಲಿರುವುದರಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳ ಕೊನೆ ಹಂತದವರೆಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಶಾಸಕ ವಿಶ್ವಾಸ ವೈದ್ಯ ತಿಳಿಸಿದರು.
ಸಮೀಪದ ನವಿಲುತೀರ್ಥ ಜಲಾಶಯದ ಬಳಿ ಮಂಗಳವಾರ ಹಮ್ಮಿಕೊಂಡಿದ್ದ ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ಎರಡನೇ ಸಭೆ ಹಾಗೂ ಬಾಗಿನ ಅರ್ಪಣೆ ಕಾರ್ಯಕ್ರಮದ ಅಧ್ಯತೆ ವಹಿಸಿ ಮಾತನಾಡಿದರು.
ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಟ್ಟದಲ್ಲಿ ಹಲವಾರು ಕಾಮಗಾರಿಗಳಿಗೆ ಅನುಮೋದನೆ ದೊರೆತರೂ ಟೆಂಡರ್​ ಸೇರಿ ಇತರ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿ. ಹೀಗಾಗಿ, ರೈತರ ಹಿತ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಈ ಭಾಗದ ರೈತರು, ಜಾನುವಾರುಗಳಿಗೆ ಕುಡಿಯುವ ನೀರಿನ ಯಾವುದೇ ತೊಂದರೆ ಇಲ್ಲ. ಜಲಾಶಯದ ಅಭಿವೃದ್ಧಿಗಾಗಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್​ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, 37 ಟಿಎಂಸಿ ಸಾಮರ್ಥ್ಯ ಹೊಂದಿದ ಮಲಪ್ರಭಾ ಜಲಾಶಯ ಉತ್ತರ ಕರ್ನಾಟಕದ ಜೀವನದಿಯಾಗಿದೆ. ರೈತರು ಸದ್ಬಳಕೆ ಮಾಡಿಕೊಳ್ಳಬೇಕು. ಜಲಾಶಯ ನಿರ್ಮಾಣವಾಗಿ 55 ವರ್ಷ ಕಳೆದಿದ್ದು, ಹೂಳು ತುಂಬಿದೆ. ಹೀಗಾಗಿ, ಸ್ವಚ್ಛತೆ ಕಾರ್ಯ ಅಗತ್ಯವಾಗಿದೆ ಎಂದರು.ನವಲಗುಂದ ಶಾಸಕ ಎನ್​.ಎಚ್​.ಕೋನರೆಡ್ಡಿ ಮಾತನಾಡಿ, ನಾಲ್ಕು ಜಿಲ್ಲೆಯ 13 ತಾಲೂಕುಗಳ ಜನರು ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ಜಲಾಶಯ ಅವಲಂಬಿಸಿದ್ದಾರೆ. ಯಾವುದೇ ಸಮಸ್ಯೆಯಾಗದೆ ಅಧಿಕಾರಿಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕು. ಜತೆಗೆ ಕೇಂದ್ರ ಸರ್ಕಾರ ಮಹದಾಯಿ ಮಲಪ್ರಭಾ ಜೋಡಣೆಗೆ ಅನುಮತಿ ಕೊಟ್ಟಲ್ಲಿ ಈ ಭಾಗದ ಜನರ ನೀರಿನ ಸಮಸ್ಯೆ ನೀಗಲಿದೆ ಎಂದರು.
ಮಲಪ್ರಭಾ ಯೋಜನಾ ವಲಯದ ಮುಖ್ಯ ಇಂಜಿನಿಯರ್​ ಲಕ್ಷ$್ಮಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಮಹಾಮಂಡಳದ ಅಧ್ಯ ಸದಾಶಿವಗೌಡ ಪಾಟೀಲ, ಉಪಾಧ್ಯ ವಿ.ಎ.ಚಿಕ್ಕಮಠ, ಪುರಸಭೆ ಅಧ್ಯ ಸಿ.ಬಿ.ಬಾಳಿ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಗ್ರಾಪಂ ಅಧ್ಯ ಡಿ.ಡಿ.ಟೋಪೋಜಿ, ನವಿಲುತೀರ್ಥ ವೃತ್ತದ ಅಧೀಕ ಇಂಜಿನಿಯರ್​ ಸುಭಾಸ ನಾಯ್ಕ, ಸಹಾಯಕ ಇಂಜಿನಿಯರ್​ಗಳಾದ ವಿವೇಕ ಮುದಿಗೌಡ್ರ, ಕೆ.ಬಿ.ಸಜ್ಜನಶೆಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net