ಪ್ರಜೆಗಳು ಶ್ರದ್ಧೆಯಿಂದ ಮತದಾನ ಮಾಡಲಿ

voting awareness (2)
ಆನಂದಪುರ ಸಮೀಪದ ಹೊಸಗುಂದ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಯಕ್ಷಗಾನ ಪ್ರದರ್ಶನದ ಮೂಲಕ ಮತ ಜಾಗೃತಿ ನಡೆಸಲಾಯಿತು.
Published on

ಆನಂದಪುರ: ಪ್ರಜಾಪ್ರಭುತ್ವದಲ್ಲಿ ಮತದಾನವೇ ಜೀವಾಳ. ದೇಶ ಕಟ್ಟುವ ಕಾರ್ಯದಲ್ಲಿ ಮತದಾನ ಅತ್ಯಂತ ಮಹತ್ವದ್ದು ಎಂದು ಸಾಗರ ತಾಪಂ ಇಒ ಎ.ಎಸ್.ಸುನೀತಾ ತಿಳಿಸಿದರು.

ಹೊಸಗುಂದದ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿ ಯಕ್ಷಗಾನದ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೈನಿಕರು ಅತ್ಯಂತ ಶ್ರದ್ಧೆಯಿಂದ ದೇಶ ಕಾಯುವ ಕಾರ್ಯ ಮಾಡುತ್ತಾರೆ. ಅದೇ ರೀತಿ ಚುನಾವಣಾ ಸಂದರ್ಭ ಪ್ರಜೆಗಳು ಅತ್ಯಂತ ಶ್ರದ್ಧೆಯಿಂದ ಮತದಾನ ನಡೆಸಬೇಕು ಎಂದರು.
ಶ್ರೀಕ್ಷೇತ್ರ ಸಿಗಂದೂರು ಮೇಳದ ಯಕ್ಷಗಾನ ಕಲಾವಿದರು ಮತದಾನದ ಮಹತ್ವ ಸಾರುವ ನೃತ್ಯ ಪ್ರದರ್ಶಿಸಿದರು. ಆನಂದ ಅಂಕೋಲಾ ಭಾಗವತರಾಗಿ, ಉದಯ್ ಕಲ್ಲಾಳ್, ಧನಂಜಯ ಪುರದಮಠ, ದೇವೇಂದ್ರ ಇಡುವಾಣಿ, ಮಹೇಶ, ನಾರಾಯಣ, ನಾಗಭೂಷಣ, ಚಂದ್ರಪ್ಪ ಮುಮ್ಮೇಳದಲ್ಲಿ ಸಾಥ್ ನೀಡಿದರು.
ದೇವಾಲಯ ಸಮಿತಿ ಸದಸ್ಯರು, ಹೊಸೂರು ಗ್ರಾಪಂ ಸ್ವೀಪ್ ಸಮಿತಿ ಸದಸ್ಯರು, ಸಾಗರ ತಾಲೂಕಿನ ಪಿಡಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net