ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಆಸಕ್ತಿವಹಿಸಲಿ

Published on

ಸರ್ಕಾರಿ ನೌಕರರ ಸಂದ ರಾಜ್ಯ ಕಾರ್ಯದರ್ಶಿ ಕೆ.ಎನ್​.ಸುಬ್ಬಾರೆಡ್ಡಿ ಸಲಹೆ

ವಿಜಯವಾಣಿ ಸುದ್ದಿಜಾಲ ಶಿಡ್ಲಟ್ಟ

ಜಾತಿ, ಮತ,ಧರ್ಮ,ಭಾಷೆಯ ಗಡಿ ಮೀರಿ ಎಲ್ಲರನ್ನೂ ಒಟ್ಟುಗೂಡಿಸುವ ಶಕ್ತಿ ಕ್ರೀಡೆ, ಸಂಗೀತಕ್ಕೆ ಇದೆ. ಕ್ರೀಡೆಯನ್ನು ಸೋಲು ಗೆಲುವಿನ ಮೂಲಕ ನೋಡದೆ ಸ್ಪರ್ಧಾತ್ಮಕ ಮನೋಭಾವದಿಂದ ನೋಡಬೇಕಿದೆ ಎಂದು ಸರ್ಕಾರಿ ನೌಕರರ ಸಂದ ರಾಜ್ಯ ಕಾರ್ಯದರ್ಶಿ ಕೆ.ಎನ್​.ಸುಬ್ಬಾರೆಡ್ಡಿ ತಿಳಿಸಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಮಗಳವಾರ ಹಮ್ಮಿಕೊಂಡಿದ್ದ ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪಿಯು ಕಾಲೇಜು ವಿದ್ಯಾರ್ಥಿಗಳ 2025&26ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು, ಯುವಜನರು ಸೇರಿ ಎಲ್ಲ ವಯೋಮಾನದವರು ಕೂಡ ಆರೋಗ್ಯದಿಂದ ಇರಬೇಕಾದರೆ ದೈಹಿಕ ಕಸರತ್ತು ಮುಖ್ಯ. ಅದು ವ್ಯಾಯಾಮ ಆಗಿರಬಹುದು ಅಥವಾ ದಿನ ನಿತ್ಯದ ಚಟುವಟಿಕೆ ಆಗಿರಬಹುದು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಅಂಕ, ರ್ಯಾಂಕ್​ ಗಳಿಸುವ ಧಾವಂತದಲ್ಲಿ ಕ್ರೀಡೆ, ಸಾಂಸತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದು ಕಡಿಮೆ ಆಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚು, ಈ ಬಗ್ಗೆ ಶಿಕ್ಷಕರು, ಇಲಾಖೆ ಹಾಗೂ ಪಾಲಕರು ಗಮನ ಹರಿಸಬೇಕು ಎಂದರು.

ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಭರ್ಜಿ ಎಸೆತ, ಗುಂಡು ಎಸೆತ, ಟ್ರಿಪಲ್​ ಜಂಪ್​ ಸೇರಿ ವಿವಿಧ ರೀತಿಯ 22 ಕ್ರೀಡೆಗಳು ನಡೆದವು. 17 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಎನ್​ಎಸ್​ಎಸ್​ ಕಾರ್ಯಕ್ರಮಾಧಿಕಾರಿ ಎಚ್​.ಸಿ.ಮುನಿರಾಜು, ದೈಹಿಕ ಶಿಕ್ಷಣ ಶಿಕ್ಷಕರ ಸಂದ ಅಧ್ಯಕ್ಷ ಪ್ರಕಾಶ್​ ಬಾಬು, ಮಂಜುನಾಥ್​, ಪ್ರಕಾಶ್​, ಸಂಪತ್​, ಪ್ರಸನ್ನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net