'ಜನ ಶುದ್ಧ ಗಾಳಿ ಉಸಿರಾಡ್ಲಿ ಬಿಡಿ, ಪಟಾಕಿ ಮೇಲಿನ ಬ್ಯಾನ್ ತೆಗೆಯಲ್ಲ' ಎಂದ ಸುಪ್ರೀಂ...

Supreme Court
Published on

ನವದೆಹಲಿ: ಪಟಾಕಿ ಹೊಡೆಯುವ ವಿಚಾರದಲ್ಲಿ ದೆಹಲಿ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಬಿಜೆಪಿ ಸಂಸದಗೆ 'ಜನ ಶುದ್ಧಗಾಳಿ ಉಸಿರಾಡಿ ಸಿಹಿ ತಿಂಡಿ ಮೇಲೆ ಖರ್ಚು ಮಾಡಲಿ' ಎಂದು ಸುಪ್ರೀಂ ಕೋರ್ಟ್​ ಹೇಳಿದೆ.

ಈ ಬಾರಿ ದೀಪಾವಳಿಗೆ ನವದೆಹಲಿಯಲ್ಲಿ ಯಾರೂ ಪಟಾಕಿಯ ಮಾರಾಟ, ಉತ್ಪಾದನೆ, ವಿತರಣೆ ಮಾಡಬಾರದು ಮತ್ತು ಅವನ್ನು ಹೊಡೆಯಬಾರದು ಎಂದು ದೆಹಲಿ ಸರ್ಕಾರ ಆದೇಶ ನೀಡಿತ್ತು. ವಾಯು ಮಾಲಿನ್ಯದ ಕಾರಣಕ್ಕೆ ದೆಹಲಿಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಈ ಆದೇಶವನ್ನು ಹೊರಡಿಸಿತ್ತು.

ಈ ನಿರ್ಧಾರವನ್ನು ಪ್ರಶ್ನಿಸಿ ಬಿಜೆಪಿ ಸಂಸದ ಮನೋಜ್ ತಿವಾರಿ ಸುಪ್ರೀಂ ಕೋರ್ಟ್​ಗೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆಯನ್ನು ತುರ್ತಾಗಿ ಮಾಡಬೇಕಾಗಿಲ್ಲ ಎಂದು ನಿರ್ಧರಿಸಿದ ಸುಪ್ರೀಂ ಅರ್ಜಿಯನ್ನು ವಜಾ ಮಾಡಿದೆ. ಈ ಮೂಲಕ ದೆಹಲಿ ಸರ್ಕಾರದ ಪಟಾಕಿ ನಿಷೇಧದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net