

ಇಂದು ಧೂಮಪಾನ ನಿಷೇಧ ದಿನ (ನೋ ಸ್ಮೋಕಿಂಗ್ ಡೇ). ಭಾರತದಲ್ಲಿ ಪ್ರತಿ ವರ್ಷ ಮಾರ್ಚ್ ತಿಂಗಳ ಎರಡನೇ ಬುಧವಾರ ಈ ದಿನ ಆಚರಿಸಲಾಗುತ್ತದೆ. ಧೂಮಪಾನವನ್ನು ತ್ಯಜಿಸಲು ಬಯಸುವವರಿಗೆ ಸಹಾಯ ಮಾಡಲು ಮತ್ತು ಧೂಮಪಾನದಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ಗೆ ಪ್ರಮುಖ ಕಾರಣ ಧೂಮಪಾನ. ಆಶ್ಚರ್ಯದ ಸಂಗತಿ ಎಂದರೆ ಪ್ರತಿ ವರ್ಷ ಮಹಿಳೆಯರು ಸ್ತನ ಕ್ಯಾನ್ಸರ್ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತದೆ ಅಮೆರಿಕದ ಅಂಕಿ-ಅಂಶ. ಧೂಮ್ರ ಸೇವನೆಯ ದುಶ್ಚಟವನ್ನು ಬಿಡೋದು ಹೇಗೆ ಎಂಬ ಪ್ರಶ್ನೆ ಎಲ್ಲ ಧೂಮಪಾನಿಗಳದ್ದು. ಈ ಬಗ್ಗೆ ನುರಿತ ವೈದ್ಯರು ಹೇಳೋದೇನು? ವಿವರ ಇಲ್ಲಿದೆ.
| ಡಾ. ಅರವಿಂದ್ ಸರ್ಜಿಕಲ್ ಆಂಕಾಲಜಿಸ್ಟ್, ಎಂ.ಎಸ್. ರಾಮಯ್ಯ ಆಸ್ಪತ್ರೆ
| ಡಾ. ಮಹಾಂತೇಶ್, ಕ್ಯಾನ್ಸರ್ ತಜ್ಞ, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ
| ಡಾ. ಮಲ್ಲಿಕಾರ್ಜುನ್ ಇಂಟರ್ ವೆನ್ಷನ್, ಆಂಕೋ ಪಲ್ಮನಾಲಜಿಸ್ಟ್, ಎಚ್ಸಿಜಿ ಕ್ಯಾನ್ಸರ್ ಆಸ್ಪತ್ರೆ
| ಡಾ. ಸಿ. ರಾಮಚಂದ್ರ, ಕ್ಯಾನ್ಸರ್ ರೋಗ ತಜ್ಞ