

ಶಿಕಾರಿಪುರ: ತಾಲೂಕಿನ ಮಾರವಳ್ಳಿ ಮಲ್ಲೇಶ್ವರ ಬೆಟ್ಟದ ಕಮಾನಿನ ಹತ್ತಿರ ಸಾರ್ವಜನಿಕರಿಗೆ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮಲ್ಲೇಶ್ವರ ಬೆಟ್ಟದ ಆರ್ಚ್ ಮೂಲಕ ಚಿರತೆ ಒಳಗೆ ಹೋಗುತ್ತಿರುವುದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಸುದ್ದಿ ತಿಳಿದ ಆರ್‌ಎ್ಒ ರೇವಣಸಿದ್ದಯ್ಯ ನೇತೃತ್ವದಲ್ಲಿ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸಂಚರಿಸಿರುವುದು ಖಾತ್ರಿಯಾಗಿದ್ದರಿಂದ ಸ್ಥಳೀಯರಿಗೆ ಕತ್ತಲಾದ ನಂತರ ಓಡಾಡಬೇಡಿ. ಕಣ್ಣಿಗೆ ಬಿದ್ದರೆ ಅದನ್ನು ಕೆಣಕುವ ಕೆಲಸ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
ಶುಕ್ರವಾರ ಎಸಿಎ್ ರವಿನಾಯ್ಕ ಮತ್ತು ಸಿಬ್ಬಂದಿ ಚಿರತೆ ಓಡಾಡಿದ ಸ್ಥಳಕ್ಕೆ ಭೇಟಿ ನೀಡಿದ್ದರು. ನಂತರ ಮಾತನಾಡಿದ ಅವರು, ಹುಲ್ಲು ಬೆಳೆದಿರುವ ಕಾರಣ ಹೆಜ್ಜೆ ಗುರುತು ಕಾಣುವುದಿಲ್ಲ. ಸುಮಾರು ನಾಲ್ಕೈದು ವರ್ಷದ ಚಿರತೆ ಇರಬಹುದು. ಅಗತ್ಯ ಬಿದ್ದರೆ ಚಿರತೆ ಸೆರೆಗೆ ಬೋನು ಇಡಲಾಗುವುದು ಎಂದು ತಿಳಿಸಿದರು.