ಬಹುನಿರೀಕ್ಷಿತ 'ಲಿಯೋ' ಟ್ರೇಲರ್​ಗೆ ದಿನಗಣನೆ; ದಳಪತಿ ವಿಜಯ್​ ಫ್ಯಾನ್ಸ್​ಗಳಲ್ಲಿ ಹೆಚ್ಚಾಯ್ತು ಕಾತರ

Untitled design - 2023-10-02T203008.730
Published on

ತಮಿಳುನಾಡು: ತಮಿಳು ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್​ ರಿಲೀಸ್​ ದಿನಾಂಕವನ್ನು ಚಿತ್ರತಂಡ ಇಂದು ಅಧಿಕೃತವಾಗಿ ಪ್ರಕಟಿಸಿದೆ.

ಲೋಕೇಶ್ ಕನಕರಾಜ್ ನಿರ್ದೇಶಿಸಿದ ಪ್ಯಾನ್​ ಇಂಡಿಯಾ 'ಲಿಯೋ' ಇದೇ ಅಕ್ಟೋಬರ್ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಸದ್ಯ ಚಿತ್ರದ ಟ್ರೇಲರ್​ ಬಗ್ಗೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದ ದಳಪತಿ ಅಭಿಮಾನಿಗಳಿಗೆ ಈಗ ಸಂತಸದ ಸುದ್ದಿ ಕೇಳಿಬಂದಿದೆ.

'ಲಿಯೋ' ಚಿತ್ರದ ಥಿಯೇಟ್ರಿಕಲ್ ಟ್ರೇಲರ್​ ಅಕ್ಟೋಬರ್ 5, 2023 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಅಧಿಕೃತವಾಗಿ ಘೋಷಿಸಿದ್ದು, ಮಾಹಿತಿಯನ್ನು ವಿಶೇಷ ಪೋಸ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಪ್ಯಾನ್​ ಇಂಡಿಯಾ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ಸರ್ಜಾ, ಮಿಸ್ಕಿನ್, ಗೌತಮ್ ವಾಸುದೇವ್ ಮೆನನ್, ಪ್ರಿಯಾ ಆನಂದ್, ಸಂತಿ ಮಾಯಾದೇವಿ, ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ 'ಜವಾನ್'​ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net