ಬಾಕ್ಸ್​ ಆಫೀಸ್​ನಲ್ಲಿ 'ಲಿಯೋ' ಅಬ್ಬರ; 10 ದಿನಗಳಲ್ಲಿ ಒಟ್ಟು ಗಳಿಕೆಯೆಷ್ಟು? ಇಲ್ಲಿದೆ ಮಾಹಿತಿ

Untitled design - 2023-10-30T163527.265
Published on

ತಮಿಳುನಾಡು: ತಮಿಳು ಚಿತ್ರರಂಗದ ದಳಪತಿ ವಿಜಯ್​ ಮತ್ತು ನಟಿ ತ್ರಿಶಾ ಕೃಷ್ಣನ್​ ಮುಖ್ಯಭೂಮಿಕೆಯಲ್ಲಿ ನಟಿಸಿದ ಪ್ಯಾನ್​ ಇಂಡಿಯಾ 'ಲಿಯೋ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು, ಪಾಸಿಟಿವ್​ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಮಧ್ಯೆ ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಿರುವ ವಿಜಯ್​ ಫಿಲಂ ಇದೀಗ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂ. ಮೈಲಿಗಲ್ಲನ್ನು ತಲುಪಿದೆ.

ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟಿದ ರಜನಿಕಾಂತ್ ಅವರ 2.0 ( 783 ಕೋಟಿ ರೂ.) ಮತ್ತು ಜೈಲರ್ (604 ಕೋಟಿ ರೂ.) ನಂತರ ಲಿಯೋ ಮೂರನೇ ತಮಿಳು ಚಿತ್ರವಾಗಿ ಹೊರಹೊಮ್ಮಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಆಕ್ಷನ್ ಜಾನರ್​ ಸಿನಿಮಾ 2023 ರಲ್ಲಿ ಜಾಗತಿಕ ಮೈಲಿಗಲ್ಲನ್ನು ತಲುಪಿದ ಐದನೇ ಭಾರತೀಯ ಚಲನಚಿತ್ರವಾಗಿದೆ.

ಬಾಲಿವುಡ್​ ನಟ ಶಾರುಖ್ ಖಾನ್ ಅಭಿನಯದ 'ಪಠಾಣ್' (1050 ಕೋಟಿ ರೂ), 'ಜವಾನ್' (1150 ಕೋಟಿ ರೂ.), ಸನ್ನಿ ಡಿಯೋಲ್ ನಟನೆಯ 'ಗದರ್ 2' (691 ಕೋಟಿ ರೂ.) ಮತ್ತು ರಜನಿಕಾಂತ್ ಅವರ 'ಜೈಲರ್' ಈ ವರ್ಷದ ಆರಂಭದಲ್ಲಿ ಮೈಲಿಗಲ್ಲು ಸಾಧಿಸಿದ ಇತರ ಚಲನಚಿತ್ರಗಳಾಗಿವೆ.

ಇಲ್ಲಿಯವರೆಗೂ ಭಾರತದಲ್ಲಿ 'ಲಿಯೋ' 285 ಕೋಟಿ ರೂ. ನಿವ್ವಳ ಗಳಿಸಿದ್ದು, ಈ ವಾರ ಭಾರತದ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ. ನಿವ್ವಳ ಮಾರ್ಕ್ ದಾಟುವ ನಿರೀಕ್ಷೆಯಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net