More

  ಮೆರಾಲ್ಡಾ ಜ್ಯುವೆಲ್ಸ್‌ನ ಕರ್ನಾಟಕದ ಮೊದಲ ಶಾಖೆ ಮಂಗಳೂರಿನಲ್ಲಿ ಕಾರ್ಯಾರಂಭ

  ಮೆರಾಲ್ಡಾ ಜ್ಯುವೆಲ್ಸ್‌ನ 4ನೇ ಶಾಖೆಗೆ ಚಿನ್ನಾಭರಣ ಪ್ರಿಯರ ಉತ್ತಮ ಪ್ರತಿಕ್ರಿಯೆ

  50 ಸಾವಿರ ರೂ.ಮೇಲ್ಪಟ್ಟ ಖರೀದಿಗೆ ಚಿನ್ನದ ನಾಣ್ಯ ಪಡೆಯುವ ಅವಕಾಶ

  ಮಂಗಳೂರು: ಚಿನ್ನ, ವಜ್ರ, ರತ್ನ, ಪೋಲ್ಕಿ ಮತ್ತು ಪ್ಲಾಟಿನಂ ಆಭರಣಗಳ ಉದ್ಯಮದಲ್ಲಿ ಹೆಸರುವಾಸಿಯಾಗಿರುವ ಮೆರಾಲ್ಡಾ ಜ್ಯುವೆಲ್ಸ್‌ನ 4ನೇ ಶಾಖೆ ಮಂಗಳೂರಿನ ಬಲ್ಮಠದಲ್ಲಿ ಭಾನುವಾರ ಕಾರ್ಯಾರಂಗೊಂಡಿತು.

  ಮೆರಾಲ್ಡಾ ಜ್ಯುವೆಲ್ಸ್‌ನ ಕರ್ನಾಟಕದ ಮೊದಲ ಶಾಖೆಯನ್ನು ವಿದಾನಸಭಾ ಸ್ಪೀಕರ್ ಯು.ಟಿ ಖಾದರ್ ಉದ್ಘಾಟಿಸಿ ಶುಭಹಾರೈಸಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

  ಕಾರ್ಯಕ್ರಮದ ಮುಖ್ಯ ಆಕರ್ಷಣೆ ಖ್ಯಾತ ಚಲನಚಿತ್ರ ನಟಿ ಆಥಿಯಾ ಶೆಟ್ಟಿ ಮಾತನಾಡಿ, ಪರಂಪರಾಗತ ಚಿನ್ನಾಭರಣಗಳ ಸಮುಹವನ್ನು ಹೊಂದಿರುವ ಮೆರಾಲ್ಡಾ ಜ್ಯುವೆಲ್ಸ್ ಕರ್ನಾಟಕದ ಗ್ರಾಹಕರನ್ನು ಮೆರಾಲ್ಡಾ ಜ್ಯುವೆಲ್ಸ್ ಆಕರ್ಷಿಸಲಿದೆ. ಇಲ್ಲಿನ ಚಿನ್ನ, ವಜ್ರ, ರತ್ನ, ಪೋಲ್ಕಿ ಮತ್ತು ಪ್ಲಾಟಿನಂ ಆಭರಣಗಳು ಗ್ರಾಹಕರಿಗೆ ಇಷ್ಟವಾಗಲಿದೆ. ಆಭರಣ ಪ್ರಿಯರ ಪ್ರಮುಖ ಆಕರ್ಷಣೆಯಾಗಿರುವ ಮೆರಾಲ್ಡಾ ಜ್ಯುವೆಲ್ಸ್ ತನ್ನ ವಿಭಿನ್ನ ಶೈಲಿಗಳ ಚಿನ್ನಾಭರಣಗಳ ಮೂಲಕ ಮಂಗಳೂರಿನ ಜನತೆಗೆ ಹೆಚ್ಚಿನ ಸೇವೆ ನೀಡಲು ತಯಾರಾಗಿದೆ ಎಂದರು.

  *ಟ್ರೆಂಡಿ ಆಭರಣಗಳ ವ್ಯಾಪಕ ಸಂಗ್ರಹ

  ಕೊಚ್ಚಿ, ಕ್ಯಾಲಿಕಟ್ ಮತ್ತು ಕಣ್ಣೂರಿನಲ್ಲಿ ಈಗಾಗಲೇ ಮಳಿಗೆಗಳನ್ನು ಹೊಂದಿರುವ ಮೆರಾಲ್ಡಾ ಜ್ಯುವೆಲ್ಸ್ ಸುಂದರ, ಸಾಂಪ್ರದಾಯಿಕ, ಆಧುನಿಕ ಮತ್ತು ಟ್ರೆಂಡಿ ಆಭರಣಗಳ ವ್ಯಾಪಕ ಸಂಗ್ರಹದಿಂದ ಕೂಡಿದೆ. ಮಂಗಳೂರಿನ ಚಿನ್ನಾಭರಣ ಪ್ರೀಯರನ್ನು ತನ್ನ ಅತ್ಯಾಕರ್ಷಕ ವಿನ್ಯಾಸ, ಶ್ರೀಮಂತ ಕಲಾತ್ಮಕತೆಯ ಆಭರಣಗಳ ಮೂಲಕ ಆಕರ್ಷಿಸಲು ಮೆರಾಲ್ಡಾ ಜ್ಯುವೆಲ್ಸ್ ಸಿದ್ಧವಾಗಿದೆ. ಈಗಾಗಲೇ ಆಭರಣ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿರುವ ಮೆರಾಲ್ಟಾ ಜ್ಯುವೆಲ್ಸ್‌ನ ಆಭರಣಗಳಿಂದ ಮಂಗಳೂರಿಗರೂ ಹೊಸ ಅನುಭವ ಪಡೆಯಲಿದ್ದಾರೆ.

  ಮೆರಾಲ್ಡಾ ಗ್ರೂಪ್‌ನ ಚೇರ‌್ಮನ್ ಅಬ್ದುಲ ಜಲೀಲ್, ಕಾರ್ಯಕಾರಿ ನಿರ್ದೇಶಕರಾದ ಜೆಸ್ಸಿಲ್ ಹಾಗೂ ಶಾನಿಲ್, ಮಂಗಳೂರು ಶಾಖೆಯ ನಿರ್ದೇಶಕರಾದ ತಮೀಮ್ ಅಹಮ್ಮದ್, ಅಬ್ದುಲ್ ರಶೀದ್ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು. ಶಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.

  ———————

  ಮೆರಾಲ್ಡಾ ಜ್ಯುವೆಲ್ಸ್ ಚಿನ್ನದ ನಾಣ್ಯ ಉಡುಗೊರೆ

  ಮೆರಾಲ್ಡಾ ಜ್ಯುವೆಲ್ಸ್ ಮಂಗಳೂರಿನ ಬಲ್ಮಠದಲ್ಲಿ ತನ್ನ 4ನೆ ಶಾಖೆ ಹಾಗೂ ಕರ್ನಾಟಕದ ಮೊದಲ ಶಾಖೆ ಉದ್ಘಾಟನೆಯ ಸಂದರ್ಭ ಆಕರ್ಷಕ ಆಭರಣಗಳನ್ನು ವೀಕ್ಷಿಸುವ ಅವಕಾಶ ಆಭರಣ ಪ್ರಿಯರಿಗೆ ದೊರಕಿದೆ. ಸಾವಿರಾರು ಚಿನ್ನಾಭರಣ ಪ್ರೀಯರು ಮೆರಾಲ್ಡಾ ಜ್ಯುವೆಲ್ಸ್‌ನ ಸಾಂಪ್ರದಾಯಿಕ, ಆಧುನಿಕ ಮತ್ತು ಟ್ರೆಂಡಿ ಆಭರಣಗಳನ್ನು ವೀಕ್ಷಿಸಿ ಸಂತಸಪಟ್ಟರು. ಮಳಿಗೆಯ ಉದ್ಘಾಟನಾ ಕೊಡುಗೆಯಾಗಿದೆ ಮುಂದಿನ ಎರಡು ವಾರಗಳ ಕಾಲ 50 ಸಾವಿರ ರೂ. ಖರೀದಿಗೆ ಚಿನ್ನದ ನಾಣ್ಯ ಉಡುಗೊರೆಯಾಗಿ ದೊರೆಯಲಿದೆ.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts