More

  ವ್ಯಕ್ತಿಯ ಮೇಲೆ ಸಾಕುನಾಯಿ ಛೂ ಬಿಟ್ಟ ಮಹಿಳೆ; ದಾಖಲಾಯ್ತು ಪ್ರಕರಣ

  ಉತ್ತರಪ್ರದೇಶ: ರೆಸಿಡೆನ್ಶಿಯಲ್ ಸೊಸೈಟಿಯ ಉದ್ಯಾನವನದಲ್ಲಿ ತಮ್ಮ ಸಾಕುನಾಯಿಗೆ ಮಲವಿಸರ್ಜನೆ ಮಾಡಲು ಬಿಡಲಿಲ್ಲ ಎಂದು ಕುಪಿತಗೊಂಡ ಮಹಿಳೆಯೊಬ್ಬರು ಮತ್ತೊಬ್ಬ ಮಹಿಳೆಯ ಮೇಲೆ ತನ್ನ ಶ್ವಾನವನ್ನು ಛೂ ಬಿಟ್ಟ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ವರದಿಯಾಗಿದೆ.

  ಇದನ್ನೂ ಓದಿ: ತೆಲಂಗಾಣದಲ್ಲಿ ಸಂಸದನಿಗೆ ಚಾಕು ಇರಿತ: ಪಾದ್ರಿ ಮನೆಗೆ ತೆರಳುತ್ತಿದ್ದಾಗ ಅಪರಿಚಿತ ದಾಳಿ

  ರೆಸಿಡೆನ್ಶಿಯಲ್ ಸೊಸೈಟಿಯ ಪಾರ್ಕ್‌ನೊಳಗೆ ತನ್ನ ಸಾಕುನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದ ಆರೋಪಿ ಮಹಿಳೆ, ನಾಯಿ ಮಲವಿಸರ್ಜನೆ ಮಾಡಲು ಉದ್ಯಾನವನದಲ್ಲಿ ಬಿಟ್ಟಿದ್ದರು. ಈ ವೇಳೆ ಅದನ್ನು ಕಂಡ ಮತ್ತೊಬ್ಬ ಮಹಿಳೆ ಈ ರೀತಿ ಮಾಡುವುದು ಬೇಡ ಎಂದು ವಿರೋಧಿಸಿದ್ದಾರೆ.

  ಈ ವೇಳೆ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆದಿದೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮಹಿಳೆ, ತನ್ನ ಸಾಕುನಾಯಿಯನ್ನು ಮಹಿಳೆಯ ಮೇಲೆ ಛೂ ಬಿಟ್ಟಿದ್ದಾಳೆ. ಶ್ವಾನದಿಂದ ಹೇಗೋ ಪಾರಾದ ವ್ಯಕ್ತಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

  ಇದನ್ನೂ ಓದಿ:  47ನೇ ವಯಸ್ಸಿನಲ್ಲಿ ನಟಿ ಪ್ರಗತಿಗೆ ಎರಡನೇ ಮದುವೆ; ಈ ಸುದ್ದಿಗೆ ನಟಿ ಹೇಳಿದ್ದೇನು ಗೊತ್ತಾ?

  ಲಕ್ನೋದ ಶಾಲಿಮಾರ್ ಗಾರ್ಡನ್ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಈ ಘಟನೆ ವರದಿಯಾಗಿದ್ದು, ದಾಳಿಗೆ ಒಳಗಾದ ಮಹಿಳೆ ನೀಡಿದ ದೂರು ಹೀಗಿದೆ. ಸೊಸೈಟಿ ಪಾರ್ಕ್‌ನಲ್ಲಿ ಮಲವಿಸರ್ಜನೆಗೆ ಅವಕಾಶ ಮಾಡಿಕೊಡಲಿಲ್ಲ ಎಂದು ತನ್ನ ವಿದೇಶಿ ತಳಿಯ ನಾಯಿಯನ್ನು ತನ್ನ ಮೇಲೆ ದಾಳಿ ಮಾಡಲು ಬಿಟ್ಟರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಘಟನೆಯಲ್ಲಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ದಾಳಿಯಿಂದ ತಪ್ಪಿಸಿಕೊಳ್ಳುವ ವೇಳೆ ಅವರ ಫೋನ್ ಹಾನಿಯಾಗಿದೆ. ಆರೋಪಿ ಮಹಿಳೆಯು ವಿದೇಶಿ ತಳಿಯ ಸಾಕಷ್ಟು ನಾಯಿಗಳನ್ನು ಹೊಂದಿದ್ದಾರೆ ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಮಡಿಯಾವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ,(ಏಜೆನ್ಸೀಸ್).

  BBKS10: ಕೇಳಿಬಂತು ‘ಹಿತ್ತಾಳೆ ಕಿವಿ’; ಧ್ವನಿ ಏರಿಸಿದ ಕಾರ್ತಿಕ್!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts