

ಕಡೂರು: ಯಗಟಿ, ಸಿಂಗಟಗೆರೆ ಹಾಗೂ ಪಂಚನಹಳ್ಳಿಯ ಮೂರು ಹೋಬಳಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಮತ್ತಷ್ಟು ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಯಗಟಿ ಮತ್ತು ಸಿಂಗಟಗೆರೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 2.10 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಯಗಟಿ, ಸಿಂಗಟಗೆರೆ, ಪಂಚನಹಳ್ಳಿ ಹೋಬಳಿ ಕೇಂದ್ರದ ಮುಖ್ಯ ರಸ್ತೆಗಳಿಗೆ ಡಿವೈಡರ್ ನಿರ್ಮಿಸಿ ಹೈಮಾಸ್ಕ್ ಲೈಟ್ ಅಳಡಿಸುವ ಯೋಜನೆ ರೂಪಿಸಲಾಗಿದೆ ಎಂದರು.
ತಾಪಂ ಇಒ ಸಿ.ಆರ್.ಪ್ರವೀಣ್, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಮೇಘನಾಥ್, ಇಂಜಿನಿಯರ್ ಹರಿರಾಮ್, ಯಗಟಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ ರವಿಕುಮಾರ್, ಸದಸ್ಯರಾದ ಯಗಟಿ ಗೋವಿಂದಪ್ಪ, ಕಲಾವತಿ, ಪಾರ್ವತಿಬಾಯಿ, ಸುನೀಲ್, ಪಿಡಿಒ ನವೀನ್, ಯಗಟಿ ಶಂಕರ್, ರವಿಕುಮಾರ್, ಸಿಂಗಟಗೆರೆ ಗ್ರಾಪಂ ಅಧ್ಯಕ್ಷೆ ಮಧುಮಾಲಾ, ಸದಸ್ಯರಾದ ರಮೇಶ್, ಗಿರೀಶ್ ಆರಾಧ್ಯ, ಸವಿತಾ, ಶಾಂತಮ್ಮ, ಕಂಸಾಗರ ಸೋಮಶೇಖರ್, ಪಿಡಿಒ ರಾಜೇಶ್, ಶ್ರೀಕಂಠ ಒಡೆಯರ್, ಅಬಿದ್ ಪಾಷಾ ಮತ್ತಿತರರಿದ್ದರು.