ಮೌಢ್ಯದಿಂದ ಆಚೆ ಬರಲು ವಿಜ್ಞಾನ ಅರಿಯಿರಿ

Published on

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ಮೌಢ್ಯದಿಂದ ಹೊರ ಬರಲು ವಿಜ್ಞಾನವನ್ನು ಅರಿತು ಅನುಕರಿಸಬೇಕು ಎಂದು ಮುಖ್ಯಶಿಕ್ಷಕ ಮೂಡಲಗೊಲ್ಲಹಳ್ಳಿ ಕೆ.ನರಸಿಂಹಪ್ಪ ತಿಳಿಸಿದರು.

ತಾಲೂಕಿನ ಕದಿರೇನಹಳ್ಳಿ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಾಹ್ಯಾಕಾಶ ದಿನಾಚರಣೆಯಲ್ಲಿ ಮಾತನಾಡಿ,ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದ್ದರೂ ಮನುಷ್ಯ ಮಾತ್ರ ಅದರ ಸಂಪೂರ್ಣ ಜ್ಞಾನವನ್ನು ಜೀವನಕ್ಕೆ ಅಳವಡಿಸಿಕೊಳ್ಳುವುದರಲ್ಲಿ ವಿಫಲನಾಗುತ್ತಿದ್ದಾನೆ. ಕಾರಣ ವಿಜ್ಞಾನವನ್ನು ಮರೆಮಾಚುತ್ತಿರುವ ಕೆಲವು ವ್ಯಕ್ತಿಗಳು ಸ್ವಾರ್ಥಕ್ಕಾಗಿ ದೇವರು, ದೆವ್ವ, ಭೂತ ಪ್ರೇತ, ಅಮಾವಾಸ್ಯೆ, ಹುಣ್ಣಿಮೆ, ರಾಹು&ಯಮಗಂಡ ಕಾಲ ಇತ್ಯಾದಿಗಳ ಹೆಸರಲ್ಲಿ ಮನುಷ್ಯನಲ್ಲಿ ಭಯ, ಆತಂಕ, ಅಂಧಾನುಕರಣೆ, ಮೌಢ್ಯ ತುಂಬಿ ಸುಜ್ಞಾನಕ್ಕೆ ತಿಲಾಂಜಲಿಯನ್ನಿಡುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರು ಆರ್ಥಿಕ ನಷ್ಟಕ್ಕೆ ಒಳಗಾಗಿ ಅಭಿವೃದ್ಧಿಯಲ್ಲೂ ಹಿಂದುಳಿಯುತ್ತಾರೆ. ಇದಕ್ಕೆಲ್ಲಾ ಪರಿಹಾರವಾಗಿ ವಿಜ್ಞಾನ ನಂಬಿ ನಡೆಯಬೇಕು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಿಂದಲೇ ಸರಿಯಾಗಿ ಅರ್ಥೈಸಿ ಉತ್ತಮ ಜೀವನಕ್ರಮಕ್ಕೆ ಅಣಿಯಾಗಬೇಕು. ಸುಜ್ಞಾನ ಭವಿಷ್ಯಕ್ಕಾಗಿ ವಿಜ್ಞಾನಿಗಳ ಜೀವನ ಕಥೆಗಳನ್ನು ಓದಬೇಕು. ಮಾದರಿಗಳನ್ನು ಕಲಿಯಬೇಕು. ಪ್ರಕೃತಿದತ್ತ ನೈಜ ಜೀವನ ನಡೆಸಿ

ಅಭಿವೃದ್ಧಿ ಕಾಣಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ದಿನದ ಮಹತ್ವ ತಿಳಿಸಲು ರಸಪ್ರಶ್ನೆ ಆಯೋಜಿಸಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಸಹಶಿಕ್ಷಕರಾದ ಬಿ.ಎನ್​.ಶ್ರೀನಿವಾಸ, ಎ.ನಾರಾಯಣಸ್ವಾಮಿ, ನಿಯೋಜಿತ ಶಿಕ್ಷಕ ಮಹಮದ್​ ಮುಸ್ತಪ,

ಸಿ.ರಜಿನಿ, ಕೆ.ಎನ್​.ಅಮರಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net