

ಮುಂಬೈ: ವೈಯಕ್ತಿಕ ಬದುಕಿನ ಬಗ್ಗೆ ಸದಾ ಚರ್ಚೆಯಲ್ಲಿರುವ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಶೀಘ್ರದಲ್ಲೇ ಲಿಯಾಂಡರ್ ಪೇಸ್, ನಟಿ ಕಿಮ್ ಶರ್ಮಾ ಅವರನ್ನು ವರಿಸಲಿದ್ದಾರೆ. ಇಬ್ಬರು ಲಿವ್ ಇನ್ ರಿಲೇಷನ್ನಲ್ಲಿದ್ದು, ಇದೀಗ ಮದುವೆಯಾಗುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಲಿಯಾಂಡರ್ ಪೇಸ್ಗೆ ಇದು ಎರಡನೇ ಮದುವೆಯಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಅವರ ಎರಡನೇ ಪತ್ನಿ ರಿಯಾ ಪಿಳ್ಳೈ ಅವರೊಂದಿಗೆ ಹಲವು ವರ್ಷ ಸಂಸಾರ ನಡೆಸಿದ ಲಿಯಾಂಡರ್ ನಂತರ ಬೇರೆಯಾಗಿದ್ದರು. ಇದಕ್ಕೆ ಸಾಕ್ಷಿಯಾಗಿ ಒಬ್ಬ ಮಗಳೂ ಇದ್ದಾಳೆ.
ಲಿಯಾಂಡರ್ ಪೇಸ್ 48 ವರ್ಷದವರಾಗಿದ್ದು, 42 ವರ್ಷದ ಕಿಮ್ ಶರ್ಮಾ ಅವರನ್ನು ವಿವಾಹ ಮಾಡಿಕೊಳ್ಳುತ್ತಿದ್ದಾರೆ. ನಾವು ಪರಸ್ಪರ ಮದುವೆಯ ಬಂಧನದಲ್ಲಿ ಬಂಧಿಸಲು ಇಚ್ಚಿಸಿದ್ದೇವೆಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಕೊಂಡಿದ್ದಾರೆ. ನಾವು ಅದ್ಧೂರಿ ಮದುವೆಯಾಗುತ್ತಿಲ್ಲ, ಕೋರ್ಟ್ ಮ್ಯಾರೇಜ್ ಆಗಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.