ನಿರ್ದೇಶಕರಿಂದಲೇ ನನ್ನ ಸಿನಿಮಾ ಜರ್ನಿ ಹಾಳಾಯ್ತು: ಬಾಲಿವುಡ್​ನ ಮತ್ತೊಂದು ಕರಾಳತೆ ಬಿಚ್ಚಿಟ್ಟ ನಟ ಅಭಯ್​ ಡಿಯೋಲ್​

Abhoy Deol
Published on

ಮುಂಬೈ: ಬಾಲಿವುಡ್​ನ ಮತ್ತೊಂದು ಕರಾಳ ಮುಖವನ್ನು ನಟ ಹಾಗೂ ನಿರ್ಮಾಪಕ ಅಭಯ್​ ಡಿಯೋಲ್​ ಅವರೇ ಬಿಚ್ಚಿಟ್ಟಿದ್ದಾರೆ. ನಟಿ ಕಂಗನಾ ರಣಾವತ್ ಅವರು ಆಗ್ಗಾಗ್ಗೆ ಬಾಲಿವುಡ್​ ಬಗ್ಗೆ ಕಿಡಿಕಾರಿ ಆರೋಪ ಹೊರಿಸುವುದು ಸಾಮಾನ್ಯ ಆದರೀಗ ಈ ಸಾಲಿಗೆ ಅಭಯ್ ಡಿಯೋಲ್​ ಕೂಡ ಸೇರಿದ್ದಾರೆ.

ನಿರ್ದೇಶಕರ ಬಗ್ಗೆ ನನಗೆ ಗಾಬರಿಯಾಗುತ್ತದೆ. ಜೀವನದಲ್ಲಿ ಮುಂದೆ ಬರಲು ನನ್ನನ್ನು ಹಲವರು ಬಳಸಿಕೊಂಡಿದ್ದಾರೆ. ಇವರಿಂದಲೇ ನನ್ನ ಸಿನಿಮಾ ಜೀವನ ಹಾಳಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಒಳ್ಳೆಯತನ ಎಲ್ಲರಿಗೂ ಎಲ್ಲಾ ಸಮಯದಕ್ಕೂ ಒಳ್ಳೆಯದಾಗಿರುವುದಿಲ್ಲ ಎಂಬುದನ್ನು ಕಲಿತಿದ್ದೇನೆ. ಹಿಂದೆ ಆದರ್ಶವನ್ನು ಹೊಂದಿದ್ದೆ ಈಗ ಹಾಗಿಲ್ಲ ಎಂದಿದ್ದಾರೆ.

2005ರಲ್ಲಿ ಇಮ್ತಿಯಾಜ್​ ಅಲಿಯ ಸೋಚ್​ ನಾ ಥಾ ಸಿನಿಮಾ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟ ಅಭಯ್​ ಡಿಯೋಲ್​ಗೆ ಹೇಳಿಕೊಳ್ಳುವಷ್ಟು ಯಶಸ್ಸೇನು ಸಿಕ್ಕಿಲ್ಲ. ಇನ್ನು 20 ಸಿನಿಮಾದಲ್ಲಿ ಇವರು ನಟಿಸಿದ್ದಾರೆ.

ಸಂದರ್ಶನವೊಂದರಲ್ಲಿ ಹೇಳಿರುವ ಅವರು, ಪ್ರಾಮಾಣಿಕತೆ ಅತ್ಯುತ್ತಮ ನೀತಿ ಎಂದೇನೂ ಅಲ್ಲ, ನಾನು ಯಾವಾಗಲೂ ನಾನಾಗಿರಲು ಪ್ರಯತ್ನಿಸಿದ್ದೇನೆ. ನಾನು ಕೆಲಸ ಮಾಡಿದ ನಿರ್ದೇಶಕರು ಲಾಭವನ್ನು ಪಡೆದುಕೊಂಡಿದ್ದಾರೆ ಹೊರತು ನನಗೇನು ಅದರಿಂದ ಉಪಯೋಗವಾಗಿಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net