ಪತಿ ಸತ್ತ ಬಳಿಕ ಇನ್​ಸ್ಟಾಗ್ರಾಂ ಬಳಸಿ ಟ್ರೋಲ್​ಗೊಳಗಾದ ಹಿರಿಯ ನಟಿ ನೀತೂಕಪೂರ್​!

Rishi Kapoor
Published on

ಮುಂಬೈ: ಹಿರಿಯ ನಟ ರಿಷಿ ಕಪೂರ್​ ಅಗಲಿ ಒಂದು ವರ್ಷ ಕಳೆದಿದೆ. ಆದರೆ ಅವರ ಪತ್ನಿ ನೀತೂ  ಕಪೂರ್​​ ಅವರು ಬದುಕಿದ್ದಾಗ ಒಂದೂ ದಿನವೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ನೆಟ್ಟಿಗರಿಂದ ಭಾರೀ ಟೀಕಾಪ್ರಹಾರವನ್ನೇ ಎದುರಿಸಬೇಕಾಗಿದೆ.

ಆಗಿದ್ದಿಷ್ಟು, ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನೀತೂ ಕಪೂರ್​ ಅವರ ಬಗ್ಗೆ ನೆಟ್ಟಿಗರು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನೀವು ನಿಮ್ಮ ಪತಿ ಬದುಕಿದ್ದಾಗ ಏಕೆ ಇದನ್ನು ಬಳಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಸ್ವತಃ ನಟಿ ನೀತೂ ಕಪೂರ್​ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂ ಬಳಸಿ ನಾನು ಟ್ರೋಲ್​ಗೆ ಒಳಗಾಗಿದ್ದೆ, ರಿಷಿಯ ಸಾವಿನ ನಂತರ ತನ್ನ ದುಃಖವನ್ನು ನಿಭಾಯಿಸಲು ತಾನು ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಹೆಚ್ಚು ಬೆರೆಯಲು ಪ್ರಾರಂಭಿಸಿದೆ ಎಂದು ನೀತು ಈ ಹಿಂದೆ ಹಂಚಿಕೊಂಡಿದ್ದರು. ತಾನು ಹಾಗೆ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಅದರ ಬಗ್ಗೆ ಟ್ರೋಲ್ ಮಾಡಲು ಪ್ರಯತ್ನಿಸಿದವರನ್ನು ಡಿಲೀಟ್​ ಮಾಡುತ್ತೇನೆ ಎಂದು ಹೇಳುವ ಮೂಲಕ ನೆಟ್ಟಿಗರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಸದ್ಯ ಇನ್​ ಸ್ಟಾಗ್ರಾಂನಲ್ಲಿ 1.8 ಮಿಲಿಯನ್​ ಹಿಂಬಾಲಕರನ್ನು ಹೊಂದಿದ್ದು, ಆಗ್ಗಾಗ್ಗೆ ತಾವು ಮಾಡುವ ಕೆಲಸಗಳು ಹಾಗೂ ಇತರ ವಿಶೇಷತೆಯನ್ನು ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net