

ಬೆಂಗಳೂರು: ಬಿಜೆಪಿಯಿಂದ ಟಿಕೆಟ್ ಮಿಸ್ ಆಗಿದ್ದಕ್ಕೆ ಕಾಂಗ್ರೆಸ್ ಕಡೆ ಮುಖ ಮಾಡಿರುವ ಲಕ್ಷ್ಮಣ್ ಸವದಿ ಕಾಂಗ್ರೆಸ್ ನಾಯಕರ ಮುಂದೆ ಪ್ರಮುಖ ಮೂರು ಬೇಡಿಕೆಗಳನ್ನು ಇಟ್ಟಿರುವುದಾಗಿ ತಿಳಿದುಬಂದಿದೆ.
ಕಳೆದ ಮೂರು ದಿನಗಳಿಂದ ಸವದಿ ಆಪರೇಷನ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಳಿದಿದ್ದರು. ಸವದಿ ಬಿಜೆಪಿ ಬಿಡುವ ಸೂಚನೆ ಸಿಗುತ್ತಿದ್ದಂತೆ ಡಿಕೆಶಿ ಕಾರ್ಯಪ್ರವೃತ್ತರಾದರು. ಬೆಳಗ್ಗೆ 7ಕ್ಕೆ ಖಾಸಗಿ ಕಾರಿನಲ್ಲಿ ಖಾಸಗಿ ಸ್ಥಳಕ್ಕೆ ತೆರಳಿದ್ದ ಡಿಕೆಶಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿಗೆ ಸೂಚನೆ ನೀಡಿದ್ದರು. ವಿಶೇಷ ವಿಮಾನದಲ್ಲಿ ಕರೆದುಕೊಂಡು ಬರಲು ಸೂಚನೆ ನೀಡಿದ್ದರು.
ಸವದಿ ಬೆಂಗಳೂರಿಗೆ ಬರುತ್ತಿದ್ದದಂತೆ ಅವರನ್ನು ಬರಮಾಡಿಕೊಂಡ ಡಿಕೆಶಿ, ಖಾಸಗಿ ಸ್ಥಳದಲ್ಲಿ ಎರಡು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ರಣದೀಪ್ ಸುರ್ಜೆವಾಲ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಉಪಸ್ಥಿತರಿದ್ದರು.
ಕಾಂಗ್ರೆಸ್ ನಾಯಕರ ಜತೆ ನಡೆದ ಚರ್ಚೆಯಲ್ಲಿ ಲಕ್ಷ್ಮಣ್ ಸವದಿ ಮೂರು ಡಿಮ್ಯಾಂಡ್ ಇಟ್ಟಿದ್ದಾರೆ. ಮೊದಲನೆಯದು ಅಥಣಿ ಟಿಕೆಟ್ ನೀಡಬೇಕು. ಎರಡನೇಯದು ಐದು ಕ್ಷೇತ್ರಗಳ ಉಸ್ತುವಾರಿ ನೀಡಬೇಕು ಎಂಬುದು ಮತ್ತು ಮೂರನೇ ಬೇಡಿಕೆ ಸರ್ಕಾರ ಬಂದರೆ ಸಚಿವ ಸ್ಥಾನ ನೀಡಬೇಕು ಎಂಬುದು. ಈ ಬೇಡಿಕೆಗಳನ್ನು ಮುಂದಿಟ್ಟು ಸವದಿ ಕಾಂಗ್ರೆಸ್ ಸೇರುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)