ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

Radhika Apte
Published on

ಮುಂಬೈ: ಸ್ತನಗಳ ಗಾತ್ರದ ಬಗ್ಗೆ ಎದುರಿಸಿದ ಟೀಕೆಗಳ ಕುರಿತು ಬಾಲಿವುಡ್​ ನಟಿ ರಾಧಿಕಾ ಆಪ್ಟೆ ಮಾಧ್ಯಮ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Radhika Apte 1

ನಟಿ ರಾಧಿಕಾ ಆಪ್ಟೆ ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. ಇವರು ವೆಲ್ಲೂರು ಜಿಲ್ಲೆಗೆ ಸೇರಿದವರು. ವಾವ್​​! ಲೈಫ್ ಹೋ ತೋ ಐಸಿ! ಹಿಂದಿ ಚಿತ್ರದ ಮೂಲಕ ಬೆಳ್ಳಿತೆರೆಗೆ ರಾಧಿಕಾ ಪದಾರ್ಪಣೆ ಮಾಡಿದರು. 2012 ರಲ್ಲಿ ಪ್ರಕಾಶ್​ ರಾಜ್​ ಅಭಿನಯದ ಧೋನಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಆ ಬಳಿಕ 2013ರಲ್ಲಿ ಕಾರ್ತಿ, ಕಾಜಲ್ ಅಗರ್ವಾಲ್, ಸಂತಾನಂ, ಪ್ರಭು ಮತ್ತು ಶರಣ್ಯ ಅಭಿನಯದ ಆಲ್ ಇನ್ ಆಲ್ ಆಖೋ ರಾಜ ಚಿತ್ರದಲ್ಲಿ ನಟಿಸಿದರು. ಬಳಿಕ ಸೂಪರ್​ ಸ್ಟಾರ್​ ರಜನಿಕಾಂತ್ ಅಭಿನಯದ 2014 ರಲ್ಲಿ ಬಿಡುಗಡೆಯಾದ ವೆಟ್ರಿ ಸೆಲ್ವನ್ ಅವರ ಕಬಾಲಿಯಲ್ಲಿ ನಟಿಸಿದರು.

ಪರಭಾಷೆ ಸಿನಿಮಾಗಳಲ್ಲಿ ಮಿಂಚು

ಕಬಾಲಿ ಚಿತ್ರದಲ್ಲಿ ರಾಧಿಕಾ ಅವರು ರಜನಿ ಎದುರು ನಟಿಸಿದ್ದರು. ಕೊನೆಯದಾಗಿ ತಮಿಳಿನ ಚಿತ್ರಂ ಪೆಸುತಡಿ 2 ನಲ್ಲಿ ನಟಿಸಿದರು. ಇದಾದ ಬಳಿಕ ತಮಿಳಿನ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೆ, ಬಾಲಿವುಡ್, ಹಾಲಿವುಡ್ ನಂತಹ ಪರಭಾಷೆಯ ಚಿತ್ರಗಳತ್ತ ರಾಧಿಕಾರ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದಲ್ಲದೆ, ಅವರು ತಮಿಳು ಭಾಷೆಯಲ್ಲಿ ಮಾತ್ರವಲ್ಲದೆ ಹಿಂದಿ, ಬೆಂಗಾಲಿ, ಮರಾಠಿ, ಮಲಯಾಳಂ, ತೆಲುಗು ಮುಂತಾದ ಹಲವು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ.

Radhika apte 2

ಬೆತ್ತಲೆಯಾಗಿಯೂ ನಟನೆ

ಇತ್ತೀಚೆಗೆ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ನೀಡುವ ಯಾವುದೇ ಪಾತ್ರದಲ್ಲಿ ರಾಧಿಕಾ ಬೋಲ್ಡ್ ಆಗಿ ನಟಿಸುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ಕೆಲವು ಚಿತ್ರಗಳಲ್ಲಿ ಬೆತ್ತಲೆಯಾಗಿಯೂ ನಟಿಸಿದ್ದಾರೆ. ಅಂತೆಯೇ ಅವರ ಎಲ್ಲ ಇಂಟಿಮೇಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿ ಭಾರೀ ವಿವಾದವನ್ನು ಸೃಷ್ಟಿಸಿದ್ದವು. ಇದರ ಜೊತೆಗೆ ಅವರು ಆಗಾಗ ತೆಗೆಯುವ ಫೋಟೋ, ವಿಡಿಯೋಗಳೆಲ್ಲ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ.

ಸ್ತನಗಳು ದೊಡ್ಡದಾಗಿರಲಿಲ್ಲ

ಇತ್ತೀಚೆಗೆ ರಾಧಿಕಾ ಆಪ್ಟೆ ಅವರು ಸಂದರ್ಶನವೊಂದನ್ನು ನೀಡಿದ್ದರು. ಅದರಲ್ಲಿ ಅವರು ತಮ್ಮ ಚಿತ್ರದ ಆರಂಭದಲ್ಲಿ ಎದುರಿಸಿದ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ. ರಾಧಿಕಾ ಅವರು ಸಿನಿಮಾ ವೃತ್ತಿಜೀವನವನ್ನು ಆರಂಭಿಸಿದ್ದು ಬಾಲಿವುಡ್​ನಿಂದ. ಆಗ ಅವರ ಮೂಗಿನ ರಚನೆ ಸರಿಯಾಗಿಲ್ಲ ಮತ್ತು ಸ್ತನಗಳು ದೊಡ್ಡದಾಗಿರಲಿಲ್ಲ ಎಂದು ಹಲವರು ಟೀಕಿಸುತ್ತಿದ್ದರಂತೆ. ಅಲ್ಲದೆ, ಸ್ತನಗಳನ್ನು ದೊಡ್ಡದು ಮಾಡಿಕೊಂಡು ನಟಿಸುವಂತೆ ಅನೇಕರು ಸಲಹೆ ನೀಡಿದ್ದಾರಂತೆ.

Radhika 3

ಗುಂಡು ಹಾರಿಸುತ್ತೇನೆ

ಸ್ತನಗಳನ್ನು ದೊಡ್ಡದು ಮಾಡಿಕೊಂಡ ಕಾರಣ ರಾಧಿಕಾ ಅವರ ದೇಹದ ತೂಕ 3ರಿಂದ 4 ಕೆಜಿಯಷ್ಟು ಹೆಚ್ಚಿದೆ. ತೂಕ ಹೆಚ್ಚಾದ ಕಾರಣ ಸಿನಿಮಾ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಕೋಪಗೊಂಡಿರುವ ರಾಧಿಕಾ, ಮಹಿಳೆಯರ ದೇಹವನ್ನು ಟೀಕಿಸುವುದು ತಮ್ಮ ಹಕ್ಕು ಎಂದು ಕೆಲವರು ಭಾವಿಸುತ್ತಾರೆ. ಈಗ ಯಾರಾದರೂ ಹಾಗೆ ಮಾತನಾಡಿದರೆ ಗುಂಡು ಹಾರಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯ ರಾಧಿಕಾ ಆಪ್ಟೆ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net