ಫಾರ್ಮ್‌ನಲ್ಲಿ ಸ್ಫೋಟ ; 18 ಸಾವಿರ ಹಸುಗಳು ಸಾವು

cow
Published on

ಅಮೆರಿಕ: ಟೆಕ್ಸಾಸ್‌ನ ಪಶ್ಚಿಮ ಭಾಗದಲ್ಲಿರುವ ಡೈರಿ ಫಾರ್ಮೊಂದರಲ್ಲಿ ಸ್ಫೋಟ ಸಂಭವಿಸಿದೆ. ಸುಮಾರು 18 ಸಾವಿರ ಹಸುಗಳು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸ್ಫೋಟದ ಬಳಿಕ ಫಾರ್ಮ್‌ನಲ್ಲಿ ಭೀಕರವಾದ ಬೆಂಕಿ ಹೊತ್ತಿಕೊಂಡಿದ್ದು, ಈ ಬೆಂಕಿಯ ಕೆನ್ನಾಲಿಗೆಗೆ 18 ಸಾವಿರ ಹಸುಗಳು ಬಲಿಯಾಗಿವೆ. ಇವುಗಳಲ್ಲಿ ಬಹುತೇಕ ಹೋಲಿಸ್ಟೈನ್‌ ಮತ್ತು ಜೆರ್ಸಿ ತಳಿಗೆ ಸೇರಿದ ಹಸುಗಳಾಗಿವೆ. ಒಂದೇ ಬಾರಿಗೆ ಇಷ್ಟೊಂದು ಪ್ರಮಾಣದ ಹಸುಗಳು ಸಾವಿಗೀಡಾಗಿರುವ ಅತಿದೊಡ್ಡ ಪ್ರಕರಣ ಎನಿಸಿಕೊಂಡಿದೆ

ಡೈರಿ ಫಾರ್ಮ್‌ನಲ್ಲಿದ್ದ ಶೇ.90ರಷ್ಟು ಹಸುಗಳು ದುರ್ಘಟನೆಯಲ್ಲಿ ಸಾವನ್ನಪ್ಪಿವೆ. ಈ ಘಟನೆಯಲ್ಲಿ ಯಾವುದೇ ಮಾನವರು ಸಾವಿಗೀಡಾಗಿಲ್ಲ. ಈ ಸ್ಫೋಟಕ್ಕೆ ಕಾರಣವೇನು ಎಂಬುದು ಬೆಳಕಿಗೆ ಬಂದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net