

ನವದೆಹಲಿ: ದೆಹಲಿ ಹೈಕೋರ್ಟ್ನಲ್ಲಿ ವರ್ಚುವಲ್ ವಿಚಾರಣೆಗೂ ಮುನ್ನ ವಕೀಲರೊಬ್ಬರು ಮಹಿಳೆಯೊಬ್ಬಳಿಗೆ ಮುತ್ತು (Lawyer Kissing Woman ) ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಇದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ವೃತ್ತಿಪರ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಮಂಗಳವಾರ ನಡೆದಿದ್ದು, ನ್ಯಾಯಾಧೀಶರು ವಿಚಾರಣೆಗೆ ಇರಲಿಲ್ಲ ಮತ್ತು ಜನರು ನ್ಯಾಯಾಧೀಶರ ಬರುವಿಕೆಗಾಗಿ ಕಾಯುತ್ತಿದ್ದರು ಎಂದು ವರದಿಯಾಗಿದೆ.
ಈ ವಿಡಿಯೋದಲ್ಲಿ ವಕೀಲರು ನ್ಯಾಯಾಲಯದ ಉಡುಪನ್ನು ಧರಿಸಿ ತಮ್ಮ ಕೋಣೆಯಲ್ಲಿ ಕುಳಿತಿರುವುದನ್ನು ಕಾಣಬಹುದು. ಆತನ ಮುಂದೆ ಸೀರೆಯುಟ್ಟ ಮಹಿಳೆಯೊಬ್ಬಳು ನಿಂತಿದ್ದಾಳೆ. ಈ ವೇಳೆ ವಕೀಲರು ಆಕೆಯ ಕೈಯನ್ನು ಎಳೆಯುತ್ತಿದ್ದಾನೆ. ಇದಾದ ಬಳಿಕ ಆಕೆ ಹಿಂಜರೆಯುವಂತೆ ಭಾಸವಾಗುತ್ತಿದೆ. ನಂತರ ಮತ್ತೆ ಆಕೆಯನ್ನು ಎಳೆದುಕೊಂಡ ವಕೀಲ ಮಹಿಳೆಗೆ ಮುತ್ತು ಕೊಟ್ಟಿರುವ ದೃಶ್ಯವನ್ನು ಈ ವಿಡಿಯೋ ತೋರಿಸುತ್ತಿದೆ.
ವಿಡಿಯೋದಲ್ಲಿರುವ ಮಹಿಳೆ ಹಾಗೂ ವಕೀಲನ ಗುರುತುಗಳು ಈವರೆಗೂ ತಿಳಿಸಿಲ್ಲ. ವೈರಲ್ ಆಗಿರುವ ದೃಶ್ಯಾವಳಿಗಳ ಸತ್ಯಾಸತ್ಯತೆಯನ್ನು ವಿಜಯವಾಣಿ ದೃಢಪಡಿಸುವುದಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದುಬರುತ್ತಿದ್ದಂತೆಯೇ ವ್ಯಾಪಕ ಆಕ್ರೋಷಕ್ಕೆ ಗುರಿಯಾಯಿತು. ಬಳಕೆದಾರರು ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಎಂತಹ ನಾಚಿಕೆಗೇಡು ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರಾದ ಕುಮಾರ್ ದೀಪರಾಜ್, ಅವರು ನ್ಯಾಯಾಧೀಶರಲ್ಲ. ಅವರು ವಕೀಲರಂತೆ ಕಾಣುತ್ತಾರೆ. ಇದು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರು ನ್ಯಾಯಾಲದ ವಿಚಾರಣೆಯಲ್ಲಿ ಇರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)