

Astrology: ಗ್ರಹಗಳ ಅಧಿಪತ್ಯವು ಮಂಗಳ ಜ್ಯೋತಿಷ್ಯದಲ್ಲಿ ಮುಖ್ಯವಾದ ಸ್ಥಾನವನ್ನು ಹೊಂದಿದ್ದಾನೆ. ಇದನ್ನು ಶಕ್ತಿ, ಧೈರ್ಯ, ಆತ್ಮವಿಶ್ವಾಸ, ನಾಯಕತ್ವದ ಅಂಶ ಎಂದು ನಂಬಲಾಗುತ್ತದೆ. ಯಾವ ರಾಶಿಯಲ್ಲಿ ಮಂಗಳ ಗ್ರಹ ಸಾಗುತ್ತದೆಯೋ, ಅವರು ವೃತ್ತಿ, ಸಂಪತ್ತು, ಆರೋಗ್ಯ ಸಂಬಂಧಿಸಿದಂತೆ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಕಂಡುಬರುತ್ತಾರೆ.
ಒಬ್ಬರ ಸ್ವಂತ ರಾಶಿಯಲ್ಲಿ ಮಂಗಳ ಚಲಿಸುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದರ ಪ್ರಭಾವವು ಹಲವು ಪಟ್ಟು ಹೆಚ್ಚಾಗುತ್ತದೆ. ಈ ಗ್ರಹದ ಸಂಚಾರವು ಉತ್ಸಾಹ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಕೆಲವು ರಾಶಿ ಚಕ್ರಗಳು ಯಶಸ್ಸು, ಪ್ರಗತಿ, ಆರ್ಥಿಕ ಲಾಭವನ್ನು ಪಡೆಯಲು ಸುವರ್ಣವಕಾಶ. ಹಾಗೇಯೇ ಅವರು ಬಾಕಿ ಇರುವಂತಹ ಕೆಲಸಗಳನ್ನು ಮಾಡಲು, ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಲು ಇದು ಪ್ರೇರೇಪಿಸುತ್ತದೆ.
ಈ ರಾಶಿ ಚಕ್ರದವರಿಗೆ ಮಂಗಳ ಗ್ರಹ ಸಂಚಾರ ಮಾಡುವುದರಿಂದ ಅದೃಷ್ಟ ಒಲಿದು ಬರಲಿದೆ. ಈ ಸಮಯದಲ್ಲಿ ಒಳ್ಳೆಯ ಅವಕಾಶಗಳು ಸಿಗುತ್ತವೆ. ಬಾಕಿ ಇರುವಂತಹ ಕೆಲಸಗಳು ಪೂರ್ಣಗೊಳ್ಳುತ್ತವೆ. ದೀಪಾವಳಿ ನಂತರ ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ನಿಮ್ಮ ಕೆಲಸ ಅಥವಾ ವ್ಯವಹಾರದಲ್ಲಿ ಹೊಸ ಯೋಜನೆಗಳು ಸಾಗಲಿದ್ದು, ಇದರಿಂದ ನೀವು ಮುನ್ನಣೆ ಪಡೆಯುತ್ತೀರಿ. ವಿದ್ಯಾರ್ಥಿಗಳಿಗೆ ಇದು ಉತ್ತಮವಾಗಿದ್ದು, ಉನ್ನತ ಶಿಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಲು ಒಳ್ಳೆಯ ಸಮಯ ಇದಾಗಿದೆ.
ಈ ರಾಶಿಯವರಿಗೆ ಗ್ರಹವು ಲಗ್ನ ರಾಶಿಯಲ್ಲಿ ಸಾಗುತ್ತದೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಶಕ್ತಿಯನ್ನು ತುಂಬುತ್ತದೆ. ಈ ವೇಳೆ ನಿಮ್ಮ ನಾಯಕತ್ವದ ಗುಣಗಳು ಹೆಚ್ಚಾಗುತ್ತವೆ. ನಿಮ್ಮ ಆರೋಗ್ಯದಲ್ಲಿ ಸುಧಾರಿಕೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಉದ್ಯಮಿಗಳು ಹೊಸ ಹೂಡಿಕೆಯಿಂದ ಅಧಿಕ ಲಾಭವನ್ನು ಪಡೆಯುತ್ತಾರೆ. ಸ್ಪರ್ಧೆ ಅಥವಾ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರೆ ವಿಜಯವನ್ನು ಸಾಧಿಸಬಹುದು.
ದೀಪಾವಳಿ ನಂತರ ಮಂಗಳ ಗ್ರಹವು ಮೀನ ರಾಶಿಯವರಲ್ಲಿ ಸಂಚಾರ ನಡೆಸುವುದರಿಂದ ಅವರ ಕೆಲಸದಲ್ಲಿ ಸಕರಾತ್ಮಕ ಪ್ರಭಾವವನ್ನು ಬೀರುತ್ತದೆ. ಈ ಸಮಯದಲ್ಲಿ ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುತ್ತೀರಿ. ಹೊಸ ಅವಕಾಶಗಳು ಹುಡುಕಿ ಬರಲಾರಂಭಿಸುತ್ತವೆ. ಹೊಸ ಉದ್ಯೋಗ, ಬಡ್ತಿ ಅಥವಾ ವ್ಯವಹಾರ ಒಪ್ಪಂದವನ್ನು ಪಡೆಯುವ ಸಾಧ್ಯತೆಯಿದೆ. ಈ ಸಮಯವು ಆಧ್ಯಾತ್ಮಿಕವಾಗಿ ಪ್ರಯೋಜನವನ್ನು ನೀಡುತ್ತದೆ. ಮನೆಯಲ್ಲಿ ಶಾಂತಿ ಸಾಮರಸ್ಯದ ವಾತಾವರಣ ಇರುತ್ತದೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.