ಗಂಡ ಹೆಂಡತಿ ಮಧ್ಯೆ 56 ವರ್ಷ ಅಂತರ: 93ನೇ ವಯಸ್ಸಿನಲ್ಲಿ ತಂದೆಯಾದ ವೈದ್ಯ!..Doctor Becomes Father At 93

Australian Doctor Becomes Father At 93
Published on

ಆಸ್ಟ್ರೇಲಿಯಾ: ( Doctor Becomes Father At 93) ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ 93 ವರ್ಷದ ವೈದ್ಯ ವೃದ್ಧಾಪ್ಯದಲ್ಲಿ ತಂದೆಯಾಗಿದ್ದಾರೆ. ಇಳಿ ವಯಸ್ಸಿನಲ್ಲಿ ತಂದೆಯಾಗುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ್ದಾರೆ.

93 ವರ್ಷದ ಡಾ. ಜಾನ್ ಲೆವಿನ್ ( Dr John Levin)  ಮತ್ತು ಅವರ ಪತ್ನಿ 37 ವರ್ಷದ ಡಾ. ಯಾಂಗಿಂಗ್ ಲು ಅವರಿಬ್ಬರ ವಯಸ್ಸಿನಲ್ಲಿ 56 ವರ್ಷಗಳ ಅಂತರವಿದೆ. ಲೆವಿನ್ ಅವರ ಪತ್ನಿ ಅವರ ಮೊಮ್ಮಗಳ ವಯಸ್ಸಿನಷ್ಟೇ ವಯಸ್ಸಿನವರು.

ಈ ಜೋಡಿ ಫೆಬ್ರವರಿ 2024 ರಲ್ಲಿ ತಮ್ಮ ಮಗ ಗ್ಯಾಬಿಯನ್ನು ಸ್ವಾಗತಿಸಿದರು. ಈ ವಿಶಿಷ್ಟ ದಂಪತಿ ಈಗ ಮತ್ತೊಂದು ಮಗುವನ್ನು ಸ್ವಾಗತಿಸಲು ತಯಾರಿ ನಡೆಸುವ ಮೂಲಕವಾಗಿ ಮತ್ತೆ ಈ ಜೋಡಿ ಸುದ್ದಿಯಾಗಿದೆ.

ಕಿರಿಯ ಮಗ ಗ್ಯಾಬಿಗೆ ಕೇವಲ ಒಂದು ವರ್ಷ

ಡಾ. ಲೆವಿನ್ ಅವರಿಗೆ ಈಗಾಗಲೇ ಮೂವರು ಬೆಳೆದ ಮಕ್ಕಳಿದ್ದಾರೆ. ಆಶ್ಲೇ (62), ಸಮಂತಾ (60), ಮತ್ತು ಗ್ರೆಗ್, ಅವರು 2024 ರಲ್ಲಿ ಮೋಟಾರ್ ನ್ಯೂರಾನ್ ಕಾಯಿಲೆಯಿಂದ ನಿಧನರಾದರು. ಈ ಮಕ್ಕಳು ಅವರ ಮೊದಲ ಪತ್ನಿಯಿಂದ ಪಡೆದಿದ್ದರು. ಲೆವಿನ್ ಅವರು ಹತ್ತು ಮಕ್ಕಳ ಅಜ್ಜ ಮತ್ತು ಒಂದು ಮಕ್ಕಳ ಮುತ್ತಜ್ಜ ಕೂಡ. ಆದರೂ, ಅವರ ಕಿರಿಯ ಮಗ ಗ್ಯಾಬಿಗೆ ಕೇವಲ ಒಂದು ವರ್ಷ ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ಗ್ಯಾಬಿ ಡಾ. ಲೆವಿನ್ ಅವರ ನಾಲ್ಕನೇ ಮಗು ಪಡೆಯುವ ಇಚ್ಛೆಯಲ್ಲಿರುವುದು ಗಮನಿಸಬೇಕಾದ ಸಂಗತಿ.

56 ವರ್ಷಗಳ ವಯಸ್ಸಿನ ಅಂತರದ ಹೊರತಾಗಿಯೂ, ದಂಪತಿಗಳು ಇನ್-ವಿಟ್ರೊ ಫಲೀಕರಣ (IVF) ಮೂಲಕ ತಮ್ಮ ಕುಟುಂಬವನ್ನು ಮತ್ತಷ್ಟು ವಿಸ್ತರಿಸಲು ದೃಢನಿಶ್ಚಯ ಮಾಡಿದ್ದಾರೆ. ಈ ಪ್ರಕ್ರಿಯೆಯು "ಸವಾಲಿನ"ದ್ದಾಗಿತ್ತು ಎನ್ನಲಾಗಿದೆ.

ಲೆನಿನ್ ಮಾತನಾಡಿ, ಇನ್-ವಿಟ್ರೊ ಫಲೀಕರಣ (IVF) ಮತ್ತು ವೀರ್ಯ ದಾನದ ಮೂಲಕ ಇದು ಸಾಧ್ಯವಾಗಿದೆ. ನಾನು ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದಲು ಬಯಸುತ್ತೇನೆ. ಗ್ಯಾಬಿ ಅವರ 21 ನೇ ಹುಟ್ಟುಹಬ್ಬದಂದು ಅವರೊಂದಿಗೆ ಇರಲು ಬಯಸುತ್ತೇನೆ. ಆ ಸಮಯದಲ್ಲಿ 116 ವರ್ಷ ವಯಸ್ಸಿನವರಾಗಿರುತ್ತೇನೆ. ಯಹೂದಿ ಸಂಪ್ರದಾಯದಲ್ಲಿ ಪ್ರಮುಖವಾದ ವಿಧಿಯಾದ ಬಾರ್ ಮಿಟ್ಜ್ವಾ ಮೂಲಕ ಗಾಬಿಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ. ಇದು ಸಾಮಾನ್ಯವಾಗಿ 13 ನೇ ವಯಸ್ಸಿನಲ್ಲಿ ನಡೆಯುತ್ತದೆ. ಈ ಸಮಾರಂಭವು ಹುಡುಗನೊಬ್ಬ ಯಹೂದಿ ಪ್ರೌಢಾವಸ್ಥೆಗೆ ಪರಿವರ್ತನೆಗೊಳ್ಳುವುದನ್ನು ಸೂಚಿಸುತ್ತದೆ ಎಂದಿದ್ದಾರೆ.

"ನಾವು ಉದ್ದಕ್ಕೂ ತಾಳ್ಮೆಯಿಂದಿದ್ದೆವು ಮತ್ತು ಅದನ್ನು ಮತ್ತೆ ಎದುರಿಸಲು ಸಿದ್ಧರಿದ್ದೇವೆ. ಶೀಘ್ರದಲ್ಲೇ ಮತ್ತೊಂದು ಮಗುವನ್ನು ಹೊಂದುವ ಭರವಸೆಯನ್ನು ವ್ಯಕ್ತಪಡಿಸಿದರು.

ಲೆವಿನ್, ಕಟ್ಟುನಿಟ್ಟಾದ ಆರೋಗ್ಯ ಕಟ್ಟುಪಾಡುಗಳನ್ನು ಕಾಯ್ದುಕೊಳ್ಳುತ್ತಾರೆ. ಕಳೆದ ಮೂರು ದಶಕಗಳಿಂದ ಹಾರ್ಮೋನ್ ಚುಚ್ಚುಮದ್ದನ್ನು ತೆಗೆದುಕೊಳ್ಳುತ್ತಿದ್ದಾರೆ. ಪ್ರತಿದಿನ ವ್ಯಾಯಾಮ ಮಾಡುತ್ತಿದ್ದಾರೆ ಮತ್ತು ಮದ್ಯ ಮತ್ತು ತಂಬಾಕನ್ನು ತಪ್ಪಿಸುತ್ತಿದ್ದಾರೆ. ದೀರ್ಘ ಮತ್ತು ಸಕ್ರಿಯ ಜೀವನದ ರಹಸ್ಯವೆಂದರೆ ಶಿಸ್ತು ಮತ್ತು ಸಮತೋಲನ ಎಂದಿದ್ದಾರೆ.

ಕೆಲವರು ಡಾ. ಲೆವಿನ್ ಅವರ ಕಥೆಯನ್ನು ಚೈತನ್ಯ ಮತ್ತು ವೈದ್ಯಕೀಯ ಪ್ರಗತಿಯ ಸ್ಪೂರ್ತಿದಾಯಕ ಉದಾಹರಣೆ ಎಂದು ಶ್ಲಾಘಿಸಿದರೆ, ಇನ್ನು ಕೆಲವರು ಅವರ ವೃದ್ಧಾಪ್ಯದ ಕಾರಣದಿಂದಾಗಿ ಇದು "ಬೇಜವಾಬ್ದಾರಿ" ಎಂದು ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net