BBKS11: ಹೊರಬಂದ ಮೇಲಿದೆ...! ವೇದಿಕೆಯಲ್ಲೇ ಖಡಕ್ ವಾರ್ನಿಂಗ್ ಕೊಟ್ಟ ಲಾಯರ್​ ಜಗದೀಶ್​

lawyer jagdish warning
Published on

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss) ಮನರಂಜನಾ ಕಾರ್ಯಕ್ರಮಕ್ಕೆ ಇದೀಗ ಹೊಸ ರೂಪ ಸಿಕ್ಕಿದ್ದು,​ ಸೀಸನ್ 10ರ ಯಶಸ್ಸಿನ ನಂತರ ಸೀಸನ್​ 11 ಸಖತ್ ಸದ್ದು ಮಾಡುತ್ತಿದೆ. ಸತತ 11 ಸೀಸನ್​ಗಳನ್ನು ತಮ್ಮ ಖಡಕ್​ ಮಾತು, ವಿಭಿನ್ನ ಶೈಲಿಯಿಂದಲೇ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)​, ಒಂದಷ್ಟು ಗೊಂದಲಗಳ ನಡುವೆ ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದು ಇದೀಗ ಅವರ ಅಪಾರ ಅಭಿಮಾನಿ ಬಳಗಕ್ಕೆ ಭಾರೀ ಖುಷಿ ನೀಡಿದೆ. ಈ ಮಧ್ಯೆ ಇಂದು ನಡೆಯುತ್ತಿರುವ ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಕಿರುತೆರೆ ನಟಿ ಭವ್ಯ ಗೌಡ ಎಂಟ್ರಿ ಕೊಟ್ಟರೆ, ಎರಡನೇ ಸ್ಪರ್ಧಿ ಆಗಿ ನಟಿ ಯಮುನಾ ಬಲಗಾಲಿಟ್ಟು ಒಳಗೆ ಬಿಗ್​ ಮನೆಯೊಳಗೆ ಪ್ರವೇಶಿಸಿದ್ದಾರೆ.

ಯಾರಿಗೆ ಖಡಕ್​ ವಾರ್ನಿಂಗ್​?

ಸಾಮಾಜಿಕ ಜಾಲತಾಣದಲ್ಲಿ ತನ್ನ ಸ್ಫೋಟಕ ಹೇಳಿಕೆಗಳಿಂದಲೇ ಸದ್ದು ಮಾಡುವ ಲಾಯರ್​ ಜಗದೀಶ್​ ಇದೀಗ ಕನ್ನಡದ ಬಿಗ್ ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಟ್ಟಿದ್ದು, ಗ್ರ್ಯಾಂಡ್​ ಓಪನಿಂಗ್​ ವೇದಿಕೆ ಮೇಲೆಯೇ ಖಡಕ್​​ ಎಚ್ಚರಿಕೆ ರವಾನಿಸಿದ್ದಾರೆ. ಎಲ್ಲಾ ಸ್ಪರ್ಧಿಗಳನ್ನು ಖುಷಿ ಖುಷಿಯಿಂದಲೇ ವೇದಿಕೆಗೆ ಆಹ್ವಾನಿಸಿದ ಕಿಚ್ಚ ಸುದೀಪ್​, ಜಗದೀಶ್​ರನ್ನು ಕೂಡ ಅದೇ ರೀತಿ ಸ್ವಾಗತಿಸಿದರು. ಈ ವೇಳೆ ತನ್ನ ಹಿನ್ನಲೆ ಬಗ್ಗೆ ಮಾತನಾಡಿದ ಲಾಯರ್ ಜಗದೀಶ್​, ತಾವು ಯಾರಿಗೂ ಅಷ್ಟು ಸುಲಭವಾಗಿ ಬಗ್ಗುವುದಿಲ್ಲ. ನಾನು ಕೊಡುವ ಮಾಂಜಗಳು ಮುಂದಿನ ಆರು ತಿಂಗಳವರೆಗೂ ಭ್ರಷ್ಟರನ್ನು ಕಾಡುತ್ತಿರುತ್ತದೆ ಎಂದರು.

bbks11

"ಭಷ್ಟ್ರರ ವಿರುದ್ಧ ಧ್ವನಿ ಎತ್ತುವ ಕೆಲಸ ನನ್ನದು. ಅವರ ಅಕ್ರಮಗಳನ್ನು ಅಲ್ಲಲ್ಲೇ ನೇರವಾಗಿ ಹೇಳುತ್ತೇನೆ. ನಾನೀಗ ಮನೆಯೊಳಗೆ ಹೋದರೆ ಅವರ ತಪ್ಪನ್ನು ಹೇಳಲು ಯಾರಿಲ್ಲ ಎಂಬುದು ನಿಜವೇ. ಆದ್ರೆ, ಮನೆಯಲ್ಲಿ ನಾನು ಇರುವ ಅಷ್ಟು ದಿನ ಮಾತ್ರ ಅಂತವರಿಗೆಲ್ಲ ಮಜಾ, ಹಬ್ಬದ ವಾತಾವರಣ. ಇಲ್ಲಿಂದ ಹೊರಬಂದ ಬಳಿಕ ಸರಿಯಾಗಿ ಕೊಡುತ್ತೀನಿ. ಅದಂತು ತಪ್ಪೋದಿಲ್ಲ. ಈಗ ಬೇಕಾದರೆ ನಾನಿಲ್ಲ ಎಂದು ಪಾರ್ಟಿ ಮಾಡಿಕೊಳ್ಳಲಿ, ನಾನು ಹೊರಬಂದ ಬಳಿಕ ಅವರಿಗೆ ಕೊಡುವುದನ್ನು ಬಿಡಲ್ಲ" ಎಂದು ವೇದಿಕೆಯಲ್ಲೇ ಖಡಕ್ ವಾರ್ನಿಂಗ್ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net