

ಮನೆಯಲ್ಲಿ ಮಾಡುವ ಯಾವುದೇ ರುಚಿಕರ ಅಡುಗೆಯು ಜೀರಿಗೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಜೀರಿಗೆಯನ್ನು ಸೇರಿಸುವುದರಿಂದ ಆಹಾರದ ರುಚಿ ಬದಲಾಗುತ್ತದೆ. ಆಯುರ್ವೇದದಲ್ಲಿ ಜೀರಿಗೆಯನ್ನು ಪ್ರಮುಖ ಔಷಧವೆಂದು ಪರಿಗಣಿಸಲಾಗುತ್ತದೆ. ಜೀರಿಗೆಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಇದೆ. ಅಲ್ಲದೆ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕೊಬ್ಬುಗಳು ಮತ್ತು ಫೈಬರ್‌ಗಳು ಸಮೃದ್ಧವಾಗಿವೆ.(Health Tips)
ಈ ಮೇಲೆ ತಿಳಿಸಿದ್ದೆಲ್ಲವೂ ಸತ್ಯ, ಆದರೆ ಎಲ್ಲ ಪದಾರ್ಥಗಳು ಎಲ್ಲರಿಗೂ ರುಚಿಕರ ಎಂದು ಹೇಳಲಾಗುವುದಿಲ್ಲ. ಕೆಲವೊಂದು ಪದಾರ್ಥಗಳು ಕೆಲವರಿಗೆ ಸರಿಹೊಂದುವುದಿಲ್ಲ. ಅಂತಹ ಪದಾರ್ಥಗಳನ್ನು ಸೇವಿಸಿದಾಗ ಅವರು ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜೀರಿಗೆ ಬಳಸುವುದನ್ನು ಕೆಲವು ಆರೋಗ್ಯ ಸಮಸ್ಯೆ ಇರುವವರು ತಪ್ಪಿಸಬೇಕು. ಯಾವ ವ್ಯಕ್ತಿಗಳು ಜೀರಿಗೆಯಿಂದ ದೂರ ಉಳಿಯಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.