

ಪ್ರಸ್ತುತ ಜೀವನಶೈಲಿಯಲ್ಲಿ ಬೊಜ್ಜು ಕರಗಿಸುವುದು ಮತ್ತು ತೂಕ ಇಳಿಸುವುದು ದೊಡ್ಡ ಸವಾಲಾಗಿದೆ. ತೂಕ ಇಳಿಸಲು ಹಲವಾರು ಮಾರ್ಗಗಳಿವೆ. ಆದರೆ ಮನೆಮದ್ದಿನ ಮೂಲಕ ಬಹುಬೇಗನೆ ತೂಕ ಇಳಿಸುವ ಆರೋಗ್ಯ ಸಲಹೆ(Health Tips)ಯನ್ನು ಇಲ್ಲಿ ಹೇಳಲಾಗಿದೆ. ಅಡುಗೆ ಮನೆಯಲ್ಲಿರುವ ಮೆಂತ್ಯ ಆರೋಗ್ಯಕರವೂ ಹೌದು ಜತಗೆ ತೂಕ ಇಳಿಸಲು ಉತ್ತಮ ಮಾರ್ಗವಾಗಿದೆ.
ತೂಕ ಇಳಿಕೆಯ ಹೊರತಾಗಿ, ಪ್ರತಿದಿನ ಬೆಳಗ್ಗೆ ನೆನೆಸಿದ ಮೆಂತ್ಯ ಬೀಜಗಳನ್ನು ತಿನ್ನುವುದು ಅನೇಕ ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮೆಂತ್ಯ ಬೀಜಗಳು ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುವುದರ ಜತೆಗೆ ಹಸಿವನ್ನು ಕಡಿಮೆ ಮಾಡುತ್ತದೆ.