

ಆಂಧ್ರಪ್ರದೇಶ: ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ 'ಗುಂಟೂರು ಕಾರಂ' ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿಯೊಂದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದು, ನಟನ ಅಭಿಮಾನಿಗಳು ಈ ಹಿಂದೆ ಸಿನಿಮಾ ತಯಾರಕರ ವಿರುದ್ಧ ಯಾವುದೇ ಅಪ್ಡೇಟ್ ಅನ್ನು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಈ ಗೊಂದಲಗಳಿಗೆ ಈಗ ಉತ್ತರ ಲಭಿಸಿದೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಗುಂಟೂರು ಕಾರಂ' ಚಿತ್ರದ ಚಿತ್ರೀಕರಣವು ಈ ಹಿಂದೆ ಕೆಲ ಸಮಯ ಸ್ಥಗಿತಗೊಂಡಿತ್ತು. ಆದ್ರೆ, ಇದೀಗ ಪುನಾರಂಭಗೊಂಡಿದ್ದು, ವರದಿಗಳ ಪ್ರಕಾರ ಆಗಸ್ಟ್ 11, 2023 ರಿಂದ ಮಹೇಶ್ ಬಾಬು ಅವರ ಬಹುಮುಖ್ಯ ದೃಶ್ಯಗಳ ಚಿತ್ರೀಕರಣವನ್ನು ನಡೆಸಲು ಚಿತ್ರತಂಡ ಯೋಜಿಸಿದೆ. ತಮ್ಮ ಕುಟುಂಬದೊಂದಿಗೆ ಪ್ರವಾಸ ತೆರಳಿರುವ 'ಪ್ರಿನ್ಸ್', ಆಗಸ್ಟ್ 16, 2023 ರಂದು ಹೈದರಾಬಾದ್ಗೆ ಹಿಂದಿರುಗಲಿದ್ದು, ಆಗಸ್ಟ್ 20 ರಂದು ಸೆಟ್ಗೆ ಬರಲಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಚಿತ್ರತಂಡ ನೀಡಿರುವ ಮಾಹಿತಿ ಅನುಸಾರ, 2024ರ ಸಂಕ್ರಾಂತಿ ಹಬ್ಬದ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ಯೋಜಿಸಿದೆ. ಮಹೇಶ್ ಬಾಬುಗೆ ಜೋಡಿಯಾಗಿ ಈ ಹಿಂದೆ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಇದೀಗ ಅವರ ಜಾಗವನ್ನು ಮೀನಾಕ್ಷಿ ಚೌಧರಿ ಬದಲಾಯಿಸಿದ್ದು, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).