ದಿಲ್ಲಿಯಲ್ಲಿ ಮತ್ತೆ ಭರ್ಜರಿ ಏರಿಕೆ ಕಂಡ ಟೊಮ್ಯಾಟೊ ಬೆಲೆ; ಸಾರ್ವಕಾಲಿಕ ದಾಖಲೆಯತ್ತ ದರ

Tomato Crop
Published on

ನವದೆಹಲಿ: ದೆಹಲಿಗೆ ಟೊಮ್ಯಾಟೊ ಪೂರೈಕೆ ಮಾಡುವ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದ ಕಾರಣ ಟೊಮ್ಯಾಟೊ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹವಮಾನ ವೈಪರೀತ್ಯದಿಂದಾಗಿ ಕಳೆದ ಎರಡು ತಿಂಗಳಿನಿಂದ ದೇಶಾದ್ಯಂತ ಟೊಮ್ಯಾಟೊ ಪೂರೈಕೆಗೆ ತೊಂದರೆಯಾಗಿದೆ. ಇದೀಗ ದೆಹಲಿಗೆ ಅಗತ್ಯವಿರುವ ತರಕಾರಿಯನ್ನು ಪೂರೈಸುವ ಆಜಾದ್‌ಪುರ ಮಾರುಕಟ್ಟೆಯಲ್ಲಿ ಕಳೆದ 2 ದಿನಗಳಿಂದ ಟೊಮ್ಯಾಟೊ ಕೊರತೆ ಉಂಟಾಗಿದೆ. ಇತ್ತೀಚೆಗೆ ಭಾರಿ ಮಳೆ ಸುರಿದ ಕಾರಣ ಟೊಮ್ಯಾಟೊ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಪೂರೈಕೆ ಕೊರತೆಯಿಂದಾಗಿ ಟೊಮ್ಯಾಟೊ ಬೆಲೆ ಮತ್ತೆ ಏರಿಕೆ ಕಂಡಿದ್ದು, ದೆಹಲಿಯಲ್ಲಿ ಮದರ್‌ ಡೈರಿ ತನ್ನ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಒಂದು ಕೆಜಿ ಟೊಮ್ಯಾಟೊವನ್ನು 259 ರೂ.ಗೆ ಮಾರಾಟ ಮಾಡುತ್ತಿದೆ. ಇದು ಟೊಮ್ಯಾಟೊದ ಈವರೆಗಿನ ಸಾರ್ವಕಾಲಿಕ ಗರಿಷ್ಠ ದರ ಎನ್ನಲಾಗಿದೆ.

ದೆಹಲಿಗೆ ಅಗತ್ಯವಿರುವ ತರಕಾರಿಯನ್ನು ಪೂರೈಸುವ ಆಜಾದ್‌ಪುರ ಮಾರುಕಟ್ಟೆಯಲ್ಲಿ ಕಳೆದ 2 ದಿನಗಳಿಂದ ಟೊಮ್ಯಾಟೊ ಕೊರತೆ ಉಂಟಾಗಿದೆ. ಇದ್ದಕ್ಕಿದ್ದಂತೆ ಪೂರೈಕೆ ಕುಂಠಿತವಾಗಿರುವುದರಿಂದ ಚಿಲ್ಲರೆ ಮಾರಾಟ ದರ ಏರಿಕೆಯಾಗಿದೆ ಎಂದು ಮದರ್‌ ಡೈರಿಯ ವಕ್ತಾರ ಹೇಳಿದ್ದಾರೆ. ಏಷ್ಯಾದ ಅತಿದೊಡ್ಡ ತರಕಾರಿ ಮಾರುಕಟ್ಟೆಯಾದ ಆಜಾದ್‌ಪುರ ಮಾರುಕಟ್ಟೆಯಲ್ಲಿ ಬುಧವಾರ ಟೊಮ್ಯಾಟೊ ಸಗಟು ದರ 170ರಿಂದ 220ರೂ.ವರೆಗೂ ಇತ್ತು.

ಭಾರಿ ಮಳೆಯ ಪರಿಣಾಮವಾಗಿ ಕಳೆದ 3 ದಿನಗಳಿಂದ ಪೂರೈಕೆ ಭಾರಿ ಕುಸಿತ ಕಂಡಿದೆ. ಬುಧವಾರ ಕೇವಲ ಶೇ.15ರಷ್ಟು ಮಾತ್ರ ಟೊಮ್ಯಾಟೊ ಪೂರೈಕೆಯಾಗಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ 6 ಟ್ರಕ್‌ಗಳು ಮಾತ್ರ ಟೊಮ್ಯಾಟೊ ಪೂರೈಸಿವೆ ಎಂದು ಆಜಾದ್‌ ಮಾರುಕಟ್ಟೆ ಟೊಮ್ಯಾಟೊ ಅಸೋಸಿಯೇಶನ್‌ನ ಅಧ್ಯಕ್ಷ ಅಶೋಕ್‌ ಕೌಶಿಕ್‌ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net