ಗಾಯಕಿ ಲತಾ ಮಂಗೇಶ್ಕರ್​ ಮನೆ ಸೀಲ್ ಆಗಲು ಎಸ್​ಪಿಬಿ ಕಾರಣನಾ?

Lata
Published on

ಹಿರಿಯ ಗಾಯಕಿ ಲತಾ ಮಂಗೇಶ್ವರ್​ ಅವರ ಮುಂಬೈನ ಪ್ರಭುಕುಂಜ್​ದಲ್ಲಿರುವ ಮನೆಯನ್ನು ಬಿಎಂಸಿ ಸೀಲ್​ ಮಾಡಿದೆ. ಕರೊನಾ ಸೋಂಕು ಹರಡುವಿಕೆ ಪ್ರಮಾಣ ಹೆಚ್ಚಿದ್ದರ ಪರಿಣಾಮ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೋರೇಷನ್​ ತಿಳಿಸಿದೆ.

ಅಂದಹಾಗೆ, ಈಗಾಗಲೇ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕರೊನಾ ಸೋಂಕಿನಿಂದ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಚಿಕಿತ್ಸೆ ಪಡೆಯುತ್ತಿದ್ದಾರೆ. 25 ದಿನಗಳಿಂದ ಅವರ ಆರೋಗ್ಯದಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಇದೆಲ್ಲವನ್ನು ಗಮನಿಸಿಯೇ ಗಾಯಕಿ ಲತಾ ಮಂಗೇಶ್ಕರ್ ಅವರ ಮನೆಯನ್ನೂ ಸೀಲ್​ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಈ ಬಗ್ಗೆ ಲತಾ ಮಂಗೇಶ್ಕರ್​ ಕುಟುಂಬದವರು ಪ್ರಕಟಣೆಯೊಂದನ್ನು ಹೊರಡಿಸಿದ್ದು, ‘ನಮ್ಮ ಕುಟುಂಬದಲ್ಲಿ ಎಲ್ಲರೂ ಕ್ಷೇಮವಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಬಿಎಂಸಿ ಮನೆಯನ್ನು ಸೀಲ್​ ಮಾಡಿದೆ. ಅದನ್ನು ಹೊರತುಪಡಿಸಿ ಮನೆಯಲ್ಲಿ ಯಾರಿಗೂ ಕರೊನಾ ಸೋಂಕು ಖಚಿತವಾಗಿಲ್ಲ’ ಎಂದಿದ್ದಾರೆ.

ಇನ್ನು ಗಣೇಶ ಹಬ್ಬ ಇರುವುದರಿಂದ ಮಂಗೇಶ್ಕರ್​ ಮನೆ ಬಳಿಯಿಂದಲೇ ಸಾಕಷ್ಟು ಗಣೇಶ್ ಮೂರ್ತಿಗಳು ವಿಸರ್ಜನೆಗೆಂದು ಹಾದು ಹೋಗುತ್ತವೆ. ಇದೆಲ್ಲದರಿಂದ ಗಾಯಕಿ ಮನೆಯಲ್ಲಿರುವವರಿಗೆ ಇದರಿಂದ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಬಿಎಂಸಿ ಮನೆಯನ್ನು ಸೀಲ್​ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net