ಜಿಎಸ್​ಟಿ ಸಂಗ್ರಹದಲ್ಲಿ ಶೇ.10 ಏರಿಕೆ; ಕಳೆದ ಡಿಸೆಂಬರ್​ನಲ್ಲಿ 1.64 ಲಕ್ಷ ಕೋಟಿ ರೂ. ಸಂದಾಯ

GST
Published on

ನವದೆಹಲಿ: ಕಳೆದ 2023ರ ಡಿಸೆಂಬರ್​ನಲ್ಲಿ 1.64 ಲಕ್ಷ ಕೋಟಿ ರೂ. ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹವಾಗಿದೆ. 2022ರ ಡಿಸೆಂಬರ್​ನಲ್ಲಿ 1.49 ಲಕ್ಷ ಕೋಟಿ ರೂ. ಸಂಗ್ರಹವಾಗಿದ್ದು, ಅದಕ್ಕೆ ಹೋಲಿಸಿದರೆ 2023ರ ಡಿಸೆಂಬರ್​ನಲ್ಲಿ ಶೇ.10 ಹೆಚ್ಚಳವಾಗಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.

2023ರ ಏಪ್ರಿಲ್​-ಡಿಸೆಂಬರ್​ ಅವಧಿಯಲ್ಲಿ ಒಟ್ಟು ಜಿಎಸ್​ಟಿ ಸಂಗ್ರಹದಲ್ಲಿ ಶೇ.12 ಬೆಳವಣಿಗೆ ಆಗಿದ್ದು, 14.97 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. 2022ರ ಇದೇ ಅವಧಿಯಲ್ಲಿ 13.40 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿತ್ತು. 2023ರ ಡಿಸೆಂಬರ್​ನಲ್ಲಿ 1,64,882 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದ್ದು, ಆ ಪೈಕಿ ಸಿಜಿಎಸ್​ಟಿ 30,443 ಮತ್ತು ಎಸ್​ಜಿಎಸ್​ಟಿ 37,935 ಹಾಗೂ ಐಜಿಎಸ್​ಟಿ 84,255 ಕೋಟಿ ರೂ. ಆಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net