ಮಗ ಬಿಜೆಪಿ ಸೇರಿರುವುದು ತುಂಬಾ ನೋವಾಗಿದೆ: ಎ.ಕೆ.ಆ್ಯಂಟನಿ

anil antony
Published on

ತಿರುವನಂತಪುರಂ: ತಮ್ಮ ಪುತ್ರ ಬಿಜೆಪಿ ಸೇರಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಮಗನ ನಿರ್ಧಾರದಿಂದ ತುಂಬಾ ನೋವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆ್ಯಂಟನಿ ನನ್ನ ಮಗ ಬಿಜೆಪಿ ಸೇರಿರುವುದು ತುಂಬಾ ನೋವುಂಟು ಮಾಡಿದೆ. ದೇಶದ ಏಕತೆಯನ್ನು ಹಾಳು ಮಾಡುತ್ತಿರುವ ಪಕ್ಷವನ್ನು ಸೇರಿರುವ ಅವನ ನಿರ್ಧಾರ ಸರಿ ಇಲ್ಲ. ಸ್ವತಂತ್ರ ಬಂದಾಗಿನಬಿಂದಲೂ ನೆಹರೂ ಕುಟುಂಬ ದೇಶದ ಏಕತೆಗಾಗಿ ಶ್ರಮಿಸುತ್ತಿದ್ದಾರೆ.

ನನಗೀಗ 82 ವರ್ಷ ನನ್ನ ಕೊನೆ ಉಸಿರು ಇರುವವರೆಗೂ ನಾನು ಕಾಂಗ್ರೆಸ್​​ ಕಾರ್ಯಕರ್ತನಾಗಿ ಇರುತ್ತೇನೆ. ಬಿಜೆಪಿ ಮತತ್ಉ ಆರ್​​ಎಸ್​ಎಸ್​ ವಿರುದ್ಧ ನನ್ನ ಧ್ವನಿಯನ್ನು ಎತ್ತುತ್ತಿರುತ್ತೇನೆ. ಅನಿಲ್ ಬಗ್ಗೆ ನನ್ನ ಬಳಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್​​ ನಾಯಕ, ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಪುತ್ರ ಅನಿಲ್​ ಗುರುವಾರ ಕೇಂದ್ರ ಸಚಿವ ಪಿಯೂಷ್​ ಗೋಯೆಲ್​​, ಮುರಳೀದರಣ್​ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net