

ಗುಜರಾತ್: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ, 2011ರ ಏಕದಿನ ವರ್ಲ್ಡ್ಕಪ್ ವಿಜೇತ ತಂಡದ ಸದಸ್ಯ ಮುನಾಫ್ ಪಟೇಲ್ ಮಕ್ಕಳ ಬೌಲಿಂಗ್ಗೆ ಮಾರು ಹೋಗಿದ್ದು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಬಾಲಕನೋರ್ವ ತನ್ನ ವೇಗದ ಎಸೆತಗಳಿಂದ ಬ್ಯಾಟ್ಸ್ಮ್ಯಾನ್ಗಳನ್ನು ಬೋಲ್ಡ್ ಮಾಡುವುದು ಕಂಡು ಬರುತ್ತದೆ. ಈ ವೇಗದ ಬೌಲರ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಮುನಾಫ್ ಪಟೇಲ್ ವಿಡಿಯೋಗೆ ಅಡಿ ಬರಹವನ್ನು ನೀಡಿದ್ದಾರೆ.
ಕಳೆದ ವರ್ಷ ಮುನಾಫ್ ಪಟೇಲ್ ವೇಗಿ ಉಮ್ರಾನ್ ಮಲಿಕ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳುವಂತೆ ಬಿಸಿಸಿಐ ಮೇಲೆ ಒತ್ತಡ ಹೇರಿದ್ದರು ಮತ್ತು ಆಯ್ಕೆ ಸಮಿತಿಯೂ ಆತನನ್ನು 17ನೇ ಆಟಗಾರನನ್ನಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದ್ದರು.