ಲ್ಯಾಪ್‌ಟಾಪ್, ಕ್ರೋಮ್ ಕಳ್ಳರ ಸೆರೆ

arrested
Published on

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿಯೇ ಲ್ಯಾಪ್‌ಟಾಪ್ ಮತ್ತು ಕ್ರೋಮ್ ಬಾಕ್ಸ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ನೌಕರರು ಸೇರಿ ಐವರನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಕಾವೇರಿನಗರದ ಎಂ. ದರ್ಶನ್ (23), ಪರಪ್ಪನ ಅಗ್ರಹಾರ ಸಿ.ಎಸ್. ಸುಜಯ್ (21), ಶ್ರೀನಗರದ ಕಾರ್ತಿಕ್ (24), ಜಯನಗರದ ಶಶಿಕುಮಾರ್ ಮತ್ತು ತ್ಯಾಗರಾಜನಗರದ ನೀಲೇಶ್ ಜಾಧವ್ (27) ಬಂಧಿತರು. 16 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 29 ಲ್ಯಾಪ್‌ಟಾಪ್, 59 ಕ್ರೋಮ್ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್‌ನಲ್ಲಿ ಇರುವ ನ್ಯೂಜೈಸಾ ಟೆಕ್ನಾಲಜಿಸ್ ಕಂಪನಿಯಲ್ಲಿ ಕಾರ್ತಿಕ್ ಮತ್ತು ಸುಜಯ್ ಟೆಕ್ನೀಷಿಯನ್‌ಗಳಾಗಿದ್ದರು. ಯಾರಿಗೂ ಕಾಣಿಸದಂತೆ ಲ್ಯಾಪ್‌ಟಾಪ್ ಮತ್ತು ಕ್ರೋಮ್ ಬಾಕ್ಸ್‌ಗಳನ್ನು ಕದ್ದು, ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ವಿಲೇವಾರಿ ಮಾಡುತ್ತಿದ್ದರು.

ಈ ಬಗ್ಗೆ ಅನುಮಾನಗೊಂಡ ಕಂಪನಿ ವ್ಯಸ್ಥಾಪಕರು, ಕೆ.ಎಸ್. ಲೇಔಟ್ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಸುಜಯ್ ಮತ್ತು ಕಾರ್ತಿಕ್ ಬಣ್ಣ ಬಯಲಾಗಿದೆ. ಈ ಇಬ್ಬರು ಕೊಟ್ಟ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಲ್ಯಾಪ್‌ಟಾಪ್ ಮತ್ತು ಕ್ರೋಮ್‌ಗಳನ್ನು ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net