‘ಭಾಷಾ ಸೌಹಾರ್ದತೆ ಅನಿವಾರ್ಯ’ ವಿಶೇಷ ಉಪನ್ಯಾಸ

hampana
Published on

ಬೆಂಗಳೂರು: ರಾಷ್ಟ್ರೀಯ ಐಕ್ಯತಾ ಸಪ್ತಾಹ 2023ರ ಶೀರ್ಷಿಕೆಯಡಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನ. 21ರಂದು ಸಂಜೆ 5 ಗಂಟೆಗೆ ‘ ಭಾಷಾ ಸೌಹಾರ್ದತೆ ಅನಿವಾರ್ಯ’ ವಿಷಯ ಕುರಿತು ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರಿಂದ ವಿಶೇಷ ಉಪನ್ಯಾಸ ಆಯೋಜಿಸಿದೆ.

ಕಾರ್ಯಕ್ರಮವು ಯೂಟ್ಯೂಬ್ ಮತ್ತು ಫೇಸ್ ಬುಕ್ ಚಾನಲ್‌ನಲ್ಲಿ ನೇರಪ್ರಸಾರ ಆಗಲಿದ್ದು, ಆಸಕ್ತರು ಕಾರ್ಯಕ್ರಮ ವೀಕ್ಷಿಸಿ ಯಶಸ್ವಿಗೊಳಿಸಲು, ಯೂಟ್ಯೂಬ್ ಹಾಗೂ ಫೇಸ್‌ಬುಕ್ ಲಿಂಕ್ ಅನ್ನು ಸ್ನೇಹಿತರಿಗೆ ಶೇರ್ ಮಾಡಿ ಹೆಚ್ಚು ಜನರು ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡುವಂತೆ ಅಕಾಡೆಮಿ ಕೋರಿದೆ.

ಯೂಟ್ಯೂಬ್: https://www.youtube.com/karnatakasahithyaacademy

ಫೇಸ್‌ಬುಕ್: https://www.facebook.com/karnatakasahityaacademy

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net