VIDEO | ನೋಡ ನೋಡುತ್ತಿದ್ದಂತೆ ರಸ್ತೆಯ ಮೇಲೆ ಕುಸಿದ ಗುಡ್ಡ!

Untitled design - 2023-08-11T153559.268
Published on

ಹಿಮಾಚಲ ಪ್ರದೇಶ: ಭಾರೀ ಮಳೆಯ ಹಿನ್ನಲೆ ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ವಿಪರೀತ ಹಾನಿಯಾಗಿದ್ದು, ಇದೀಗ ಮಂಡಿ-ಪಂಡೋ ರಾಷ್ಟ್ರೀಯ ಹೆದ್ದಾರಿಯ 6ನೇ ಮೈಲಿಯಲ್ಲಿ ದಿಢೀರ್​ ಭೂಕುಸಿತ ಉಂಟಾಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಮಂಡಿ ಜಿಲ್ಲೆಯ ಪಾಂಡೋಹ್‌ನಲ್ಲಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಬೃಹತ್ ಗಾತ್ರದ ಬಂಡೆಗಳು ಬೆಟ್ಟದಿಂದ ಉರುಳಿ ರಸ್ತೆಯ ಮೇಲೆ ಬಿದ್ದಿವೆ. ಇದರಿಂದ ಶುಕ್ರವಾರ (ಆಗಸ್ಟ್​ 11) ಬೆಳಗ್ಗೆ ಕೆಲ ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಸ್ಥಳೀಯ ಪ್ರಯಾಣಿಕರು ಪರದಾಡುವಂತಾಯಿತು. ಮಳೆಗಾಲದ ಆರಂಭದಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳು ಮತ್ತು ರಸ್ತೆ ಅಪಘಾತಗಳಲ್ಲಿ 234 ಜನರು ಸಾವನ್ನಪ್ಪಿದ್ದಾರೆ ಎಂದು ಇತ್ತೀಚಿನ ವರದಿ ಉಲ್ಲೇಖಿಸಿದೆ.

ತುರ್ತು ಕೇಂದ್ರದ ಪ್ರಕಾರ ಹಿಮಾಚಲ ಪ್ರದೇಶವು 6,742 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸಿದೆ. ರಾಜ್ಯದಲ್ಲಿ ಇನ್ನೂ ಸುಮಾರು 160 ರಸ್ತೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಗುರುವಾರದಿಂದ ಭಾನುವಾರದವರೆಗೂ ಈ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಸ್ಥಳೀಯ ಹವಾಮಾನ ಕಚೇರಿ ಯೆಲ್ಲೋ ಅಲರ್ಟ್​ ಘೋಷಿಸಿದೆ. ಇದರೊಟ್ಟಿಗೆ ನೀರಿನ ಹರಿವಿನ ಹೆಚ್ಚಳದಿಂದ ಭೂಕುಸಿತಗಳು, ಹಠಾತ್ ಪ್ರವಾಹಗಳು, ಮಣ್ಣಿನ ಕುಸಿತಗಳು ಉಂಟಾಗುವ ಸಾಧ್ಯತೆಗಳು ಅಧಿಕವಿರಲಿದೆ ಎಂದು ಎಚ್ಚರಿಕೆ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net